ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗು ಬಲಿ..!

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಕೂಡ ಸಿಕ್ಕಾಪಟ್ಟೆ ಸೆಲ್ಫಿ ಕ್ರೇಜ್ ಸಖ್ಖತ್ತಾಗೆ ಇದೆ. ಅಪ್ಪ-ಅಮ್ಮನ ಸೆಲ್ಫಿ ಕ್ರೇಜ್‍ಗೆ 3 ವರ್ಷದ ಮಗುವೊಂದು ಕೆರೆ ನೀರಿಗೆ ಬಿದ್ದು ಮೃತಪಟ್ಟ ಪ್ರಕರಣ ಗುಜರಾತಿನ ಸೂರತ್‍ನಲ್ಲಿ ನಡೆದಿದೆ.
ಶುಕ್ರವಾರ ಅಲ್ತಾನ್ ಗಾರ್ಡನ್ ನಲ್ಲಿ ನಮ್ಮ ಹೆಣ್ಣು ಮಗುವನ್ನು ಕಳ್ಳತನ ಮಾಡಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದನ್ನು ಖಾತ್ರಿ ಪಡಿಸಿದ್ದಾರೆ. ಆಗಸ್ಟ್ 3 ರಂದು ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಸೂರತ್ ಸಮೀಪದ ಅಲ್ತಾನ್ ನ್ಯಾಷನಲ್ ಪಾರ್ಕ್ ಗೆ ತೆರಳಿದ್ದಾರೆ. ಮಕ್ಕಳನ್ನು ಪಾರ್ಕ್ ನಲ್ಲಿ ಆಟವಾಡಲು ಬಿಟ್ಟು, ದಂಪತಿ ಸೆಲ್ಫಿ ತೆಗೆದುಕೊಳ್ಳುಲು ಮುಂದಾಗಿದ್ದಾರೆ. 3 ವರ್ಷದ ಹೆಣ್ಣು ಮಗುವೊಂದು ಆಟವಾಡುತ್ತ ಅಲ್ಲಿದ್ದ ಕೆರೆಗೆ ಜಾರಿ ಬಿದ್ದಿದೆ. ಆದರೆ ಪೋಷಕರು ತಮ್ಮ ಮಗುವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಮಗು ಆಟ ಆಡುವಾಗ ಕೆರೆಗೆ ಬಿದ್ದು ಪ್ರಾಣ ಬಿಟ್ಟಿದೆ. ಪೋಷಕರ ಸೆಲ್ಫಿ ಕ್ರೇಜಿಗೆ ಮಗು ಬಲಿಯಾಗಿದೆ.
Comments