ತಮ್ಮನ ಕೊಲೆಗೆ ಸೇಡು ತೀರಿಸಿಕೊಳ್ಳಲು ಶಾಲೆಯ ಬಿಸಿಯೂಟದಲ್ಲಿ ವಿಷ ಬೆರೆಸಿದ ಬಾಲಕಿ..!

20 Jul 2018 10:05 AM | Crime
390 Report

ತಮ್ಮನ ಕೊಲೆಗೆ ಸೇಡು ತೀರಿಸಿಕೊಳ್ಳಲೆಂದು ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ವಿಷ ಬೆರಸಲು ಏಳನೇ ತರಗತಿಯ ಬಾಲಕಿಯೊಬ್ಬಳು ಪ್ರಯತ್ನಿಸಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಇದೇ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿದ್ದಂತಹ ಈ ಬಾಲಕಿಯ ತಮ್ಮನನ್ನು ಐದನೇ ತರಗತಿಯ ಬಾಲಕನೊಬ್ಬ ಏಪ್ರಿಲ್ 2ರಂದು ಹತ್ಯೆ ಮಾಡಿದ್ದನು. ಆ ಬಾಲಕ ಇದೀಗ ರಿಮ್ಯಾಂಡ್ ಹೋಮ್‍ನಲ್ಲಿದ್ದಾನೆ. ತನ್ನ ಸಹೋದರನ ಕೊಲೆಗೆ ಸೇಡನ್ನು ತೀರಿಸಿಕೊಂಡನು… ಶಾಲೆಯ ಎಲ್ಲ ಮಕ್ಕಳನ್ನು ಕೊಲ್ಲುವುದು ಈ ವಿದ್ಯಾರ್ಥಿನಿಯ ಉದ್ದೇಶವಾಗಿತ್ತು. ಮಂಗಳವಾರ ಈ ಬಾಲಕಿ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿದ್ದ ಪಾತ್ರೆಗಳಿಗೆ ವಿಷ ಹಾಕಿದ್ದನ್ನು ಅಡುಗೆ ಸಿಬ್ಬಂದಿ ನೋಡಿ, ಶಾಲಾ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳು ಊಟ ಮಾಡುವುದಕ್ಕೂ ಮುನ್ನವೇ ಇದು ತಿಳಿದುಬಂದಿದೆ... ಶಾಲೆಯ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಬಂಟಕ ಠಾಣೆ ಪೊಲೀಸರು ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Edited By

Manjula M

Reported By

Manjula M

Comments