ಅಮಾವಾಸ್ಯೆಯ ದಿನ ಹುಟ್ಟಿದ ಹೆಂಗಸಿನ ಬಲಿ ಕೊಟ್ರೆ ಸಿಗುತ್ತೆ ನಿಧಿ..! ಹಾಗಂತ ಮಹಿಳೆ ಅಪಹರಿಸಿದವ ಸೇರಿದ್ದು ಎಲ್ಲಿಗೆ ಗೊತ್ತಾ?

ಕಾಲ ಬದಲಾದರೂ ಜನ ಮಾತ್ರ ಬದಲಾಗಿಲ್ಲ. ನಮ್ಮಲ್ಲಿ ಮೂಡನಂಬಿಕೆಗಳು ಇನ್ನೂ ಜೀವಂತವಾಗಿವೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಅದಕ್ಕೆ ಪುಷ್ಟಿ ನೀಡುವಂತೆ ಅಮಾವಾಸ್ಯೆಯಂದು ಹುಟ್ಟಿದ ಹೆಂಗಸನ್ನು ಬಲಿ ಕೊಟ್ರೆ ನಿಧಿ ಸಿಗುತ್ತದೆ ಎನ್ನುವ ಮೂಢನಂಬಿಕೆಯಲ್ಲಿ ತನ್ನ ಬಳಿ ಕೆಲಸ ಮಾಡ್ತಿದ್ದ ಡ್ರೈವರ್ ಹೆಂಡತಿ, ಮಕ್ಕಳನ್ನೇ ಅಪಹರಿಸಿದ್ದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ.
ಯಾವುದೋ ಮನೆಯೊಂದರಲ್ಲಿ ಕೂಡಿಟ್ಟಿದ್ದವನ ಸಂಚಿನ ಬಗ್ಗೆ ಕಿಡ್ನಾಪ್ ಆಗಿದ್ದ ಮಹಿಳೆ ತನ್ನ ಗಂಡನಿಗೆ ಫೋನ್ ಮಾಡಿ, ತನ್ನ ಅಪಹರಣ ಹಾಗೂ ನಿಧಿಗಾಗಿ ಬಲಿ ಕೊಡಲು ಮುಂದಾಗಿದ್ದಾನೆ ಎಂದು ತಿಳಿಸಿದ್ದಾರೆ. ಕೂಡಲೇ ಪತಿ ರಾಜೇಶ್ ಆ ಫೋನ್ ಕಾಲ್ ರೆಕಾರ್ಡ್ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಮೊಬೈಲ್ ಲೊಕೇಷನ್ ಪರಿಶೀಲಿಸಿ ಮಹಿಳೆ ಮತ್ತು ಮಕ್ಕಳನ್ನ ಪತ್ತೆ ಮಾಡಿದರು. ಹಾಸನ ನಗರದ ಹೊರವಲಯ ತಣ್ಣೀರುಹಳ್ಳದ ಮನೆಯಲ್ಲಿ ಬಂಧಿಸಿಟ್ಟಿದ್ದ ಅನಿಲ್‍ನನ್ನ ಪೊಲೀಸರು ಬಂಧಿಸಿದ್ದಾರೆ.
Comments