ಪತ್ನಿಯ ಶವದ ಜೊತೆ ಐದು ದಿನ ಕಳೆದ ಪತಿ..! ಕಾರವಾರದಲ್ಲೊಂದು ಹೃದಯ ವಿದ್ರಾವಕ ಘಟನೆ..!!

ಹೃದಯಾಘಾತದಿಂದ ಮೃತಪಟ್ಟ ಪತ್ನಿಯ ಶವದ ಜೊತೆ ಪಾರ್ಶ್ವವಾಯುವಿನಿಂದ ನರಳುತ್ತಿದ್ದ ಗಂಡ ಐದು ದಿನ ಕಳೆದಿರುವಂತಹ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಕೆಹೆಚ್‍ಬಿ ಕಾಲೋನಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಗುಡಿಸಲಿನಲ್ಲಿ ಆನಂದು ಮತ್ತು ಗಿರಿಜಾ ದಂಪತಿ ವಾಸ ಮಾಡುತ್ತಿದ್ದು ಹೆಂಡತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಇವರಿಗೆ ಮಕ್ಕಳಿರಲಿಲ್ಲ ಹಾಗಾಗಿ ಪತ್ನಿ ಗಿರಿಜಾ ಪತಿಯ ಆರೈಕೆಯನ್ನು ಮಾಡುವಂತಾಗಿತ್ತು. ಹಲವು ತಿಂಗಳುಗಳಿಂದ ಹಾಸಿಗೆಯಲ್ಲೇ ಇದ್ದಂತಹ ಪತಿಗೆ ಐದು ದಿನಗಳ ಹಿಂದೆ ಪತ್ನಿ ಸತ್ತಿರುವುದು ಕೂಡ ತಿಳಿದಿರಲಿಲ್ಲ. ಆಹಾರ, ಕುಡಿಯಲೂ ನೀರು ಇಲ್ಲದೆ ಹಾಸಿಗೆಯಲ್ಲೇ ಮಲಗಿದ್ದ ಆತ ಪತ್ನಿಯ ಶವದ ಪಕ್ಕದಲ್ಲಿ ಕಂಡರೂ ಬೇರೆಯವರನ್ನು ಕರೆಯಲಾಗದ ನಿಸ್ಸಾಯಕ ಸ್ಥಿತಿಯಲ್ಲಿದ್ದರು.
Comments