ಗೌರಿ ಹತ್ಯೆ ಪ್ರಕರಣದಲ್ಲಿ ಆರೋಪಿ ನವೀನ್ ಕುಮಾರ್ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

ಗೌರಿ ಹತ್ಯೆಗೆ ಆರೋಪಿಗಳಿಗೆ ಸಹಕಾರ ನೀಡಿದಂತಹ ಆರೋಪ ಹೊತ್ತಿರುವ ನವೀನ್ಕುಮಾರ್ ಜಾಮೀನು ಜುಲೈ 9ಕ್ಕೆ ನಿರ್ಧಾರವಾಗಲಿದೆ. ಸೆಷನ್ಸ್ ಕೋರ್ಟ್ನ ನ್ಯಾಯಾಧೀಶರಾದ ಟಿ.ಟಿ ರಾಮಲಿಂಗೇಗೌಡ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಪ್ರಕರಣದ ತನಿಖಾಧಿಕಾರಿ ಅನುಚೇತ್ ಕೋರ್ಟ್ಗೆ ಹಾಜರಾಗಿದ್ದರು.
ಎಸ್ಐಟಿ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕರಾದ ಶ್ರೀಶೈಲ ವಡವಡಗಿ ಆರೋಪಿ ನವೀನ್ ಕುಮಾರ್ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಪ್ರಮುಖ ಆರೋಪಿಗಳಿಗೆ ನವೀನ್ ಕುಮಾರ್ ಸಹಕಾರ ನೀಡಿರುವುದು ತನಿಖೆಯಲ್ಲಿ ಬಯಲಾಗಿದೆ ಎಂದಿದ್ದಾರೆ. ಆರೋಪಿ ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಸಮ್ಮತಿ ನೀಡಿ ನಂತರ ಬೇಡ ಎಂದಿದ್ದಾನೆ. ಈ ಪ್ರಕರಣದ ತನಿಖೆ ಸಂಪೂರ್ಣವಾಗಿ ಮುಗಿದಿಲ್ಲ. ಈ ಹಂತದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ಮನವಿ ಮಾಡಲಾಗಿದೆ.
Comments