ಬೆಂಗಳೂರಿಗರೆ ಎಚ್ಚರ: ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಮುನ್ನ ಇದನ್ನೊಮ್ಮೆ ಓದಿ..!

ಬೆಂಗಳೂರಿನಲ್ಲಿ ಸ್ವಿಮ್ಮಿಂಗ್ ಪೂಲ್ ಗೆ ಹೋಗುವ ಮುನ್ನ ಸ್ವಲ್ಪ ಎಚ್ಚರವಾಗಿರಿ ಏಕೆಂದರೆ ಸ್ವಿಮ್ಮಿಂಗ್ ಮಾಡುತ್ತಿರುವಾಗಲೇ ಮೊಬೈಲ್ ಮತ್ತು ಪರ್ಸ್ ಕಳ್ಳತನ ಮಾಡುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಜಯನಗರದ ಸ್ವಿಮ್ಮಿಂಗ್ ಪೂಲ್ ನಲ್ಲಿ ಕಳೆದ ಕೆಲ ದಿನಗಳಿಂದ ಮೊಬೈಲ್ ಮತ್ತು ಹಣವನ್ನು ಕಳ್ಳತನ ಮಾಡುತ್ತಿದ್ದಾರೆ. ಸ್ವಿಮ್ಮಿಂಗ್ ಪೂಲ್ ಗೆ ಎಷ್ಟು ಜನ ಹೋಗುತ್ತಾರೆ. ಯಾರು ಯಾರು ಕಾರಿನಲ್ಲಿ ಬಂದಿದ್ದಾರೆ. ಯಾರ್ ಯಾರ್ ಮೊಬೈಲ್ ತಂದಿದ್ದಾರೆ ಎಂದು ಕಳ್ಳರು ಮೊದಲೇ ಗಮನಿಸಿ ನಂತರ ಟಿಕೆಟ್ ಪಡೆದು ಸ್ವಿಮ್ಮಿಂಗ್ ಪೂಲ್ ಒಳಗೆ ಕಳ್ಳರು ಹೋಗುತ್ತಾರಂತೆ. ಸ್ವಿಮ್ಮಿಂಗ್ ಮಾಡಲು ಬಂದವರು ತಮ್ಮ ಉಡುಪುಗಳನ್ನು ಕಳಚಿಟ್ಟು ಸ್ವಿಮ್ಮಿಂಗ್ ಮಾಡಲು ಹೋಗುತ್ತಾರೆ. ಆದರೆ ಅವರು ಸ್ವಿಮ್ಮಿಂಗ್ ಮುಗಿಸಿ ವಾಪಸ್ ಬರುವಷ್ಟರಲ್ಲಿ ಕಳ್ಳರು ಮೊಬೈಲ್ ಮತ್ತು ಹಣವನ್ನು ದೋಚಿ ಪರಾರಿಯಾಗುತ್ತಿದ್ದರು. ಹಣ ಮತ್ತು ಮೊಬೈಲ್ ಕಳೆದುಕೊಂಡವರು ಈ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಹೀಗಾಗಿ ಮಪ್ತಿಯಲ್ಲಿ ಪೊಲೀಸರು ಸ್ವಿಮ್ಮಿಂಗ್ ಪೂಲ್ ಗೆ ಬಂದು ಕಾರ್ಯಾಚರಣೆ ನಡೆಸಿ ಬಾಲಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
Comments