ಹಳೆ ನೋಟು ಬದಲಾವಣೆ ಹಗರಣ ಕುರಿತು ಸಿದ್ದು , ಕೆ.ಜೆ. ಜಾರ್ಜ್ ವಿರುದ್ಧ ಸ್ಪೋಟ ದಾಖಲು ಬಿಡುಗಡೆ..!!



ಹಳೆ ನೋಟು ಬದಲಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆ.ಜೆ. ಜಾರ್ಜ್ ಮೇಲೆ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಲೋಕಾಯುಕ್ತ ಎಸಿಬಿ, ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಬಿಜೆಪಿಯ ಬೆಂಗಳೂರು ನಗರ ವಕ್ತಾರ ಎನ್.ಆರ್.ರಮೇಶ್, ನೋಟು ಅಮಾನ್ಯೀಕರಣದ ಬಳಿಕ ಬೆಂಗಳೂರು ಒನ್ ಕೇಂದ್ರದಲ್ಲಿ ತಮ್ಮ ಅಧಿಕಾರ ಬಳಸಿ ನೋಟು ವಿನಿಮಯ ಮಾಡಿಕೊಂಡಿದ್ದಾರೆ. ಸುಮಾರು 410 ಕೋಟಿ ಹಳೆ ನೋಟು ವಿನಿಮಯವಾಗಿದೆ ಎಂದು ದೂರಿದ್ದಾರೆ. ಇದ್ದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ ಬೆಂಗಳೂರು ಒನ್ ನಲ್ಲಿ ಗ್ರಾಹಕರಿಂದ ಸಂಗ್ರಹವಾದ ಸಣ್ಣ ಮೊತ್ತದ ಹಣವನ್ನು ಅಕ್ರಮವಾಗಿ ಕೆಜೆ ಜಾರ್ಜ್, ಸಿದ್ರಾಮಯ್ಯ ಮತ್ತು ಭೈರತಿ ಬಸವರಾಜ್ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದಾರೆ. 2016ರ ನವೆಂಬರ್ ನಿಂದ 141 ದಿನಗಳಲ್ಲಿ ಹಳೇನೋಟು ವಿನಿಮಯವಾಗಿದ್ದು, 500, 1000 ಮುಖಬೆಲೆಯ 410 ಕೋಟಿ ರೂ. ಹಳೆ ನೋಟಿಗೆ 100, 50 ರೂ. ಮುಖಬೆಲೆಯ ನೋಟು ಪಡೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
Comments