ಶಾಕಿಂಗ್ ನ್ಯೂಸ್: ರೋಡ್ ಶೋ ವೇಳೆ ಪ್ರಧಾನಿ ಮೋದಿ ಯವರನ್ನು ಮುಗಿಸಲು ಸಂಚು..!

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಣಕ್ಕೆ ಸರ್ವಕಾಲಿಕ ಗರಿಷ್ಠ ಆತಂಕ ಎದುರಾಗಿದ್ದು, ಹಿಂದೆಂದೂ ಕಂಡು ಕೇಳರಿಯದಂಥ ಭದ್ರತೆ ಒದಗಿಸಲಾಗಿದ್ದು. ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಸಂಬಂಧ ಗೃಹ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸ್ಪಷ್ಟ ಸೂಚನೆ ನೀಡಿದ್ದು, ಹೊಸದಾಗಿ ಜಾರಿಗೆ ಬಂದಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.
ಪ್ರಧಾನಮಂತ್ರಿಯವರ ವಿಶೇಷ ಭದ್ರತಾ ಪಡೆಗಳಿಂದ ಕೂಲಂಕಷ ತಪಾಸಣೆಯಾಗದ ಹೊರತು ಸಚಿವರಾಗಲಿ, ಪಕ್ಷದ ಉನ್ನತ ಮುಖಂಡರಾಗಲಿ ಅಥವಾ ಹಿರಿಯ ಅಧಿಕಾರಿಗಳು ಮೋದಿ ಅವರ ಹತ್ತಿರ ಸುಳಿಯುವಂತಿಲ್ಲ ಎಂಬ ಕಠಿಣ ನಿಯಮವನ್ನೂ ಜಾರಿಗೊಳಿಸಲಾಗಿದೆ. 2019ರ ಲೋಕಸಭೆ ಚುನಾವಣೆ ಹಾಗೂ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಮೋದಿ ತಾರಾ ಪ್ರಚಾರಕರಾಗಿದ್ದಾರೆ. ಆದರೆ ಚುನಾವಣೆ ಪ್ರಚಾರದ ವೇಳೆ ರೋಡ್ ಶೋಗಳಲ್ಲಿ ಭಾಗವಹಿಸದಂತೆ ಭದ್ರತಾ ಮೂಲಗಳು ಗಂಭೀರ ಸಲಹೆ ಮಾಡಿವೆ. ಪ್ರಧಾನಿ ಅವರ ಬಳಿ ಹೋಗಲೇಬೇಕಾದ ಅನಿವಾರ್ಯ ಸ್ಥಿತಿ ಇದ್ದರೆ ಸಚಿವರೂ ಮತ್ತು ಉನ್ನತಾಧಿಕಾರಿಗಳೂ ಕೂಡ ವಿಶೇಷ ರಕ್ಷಣಾ ಸಮೂಹ(ಎಸ್‍ಪಿಜಿ)ದಿಂದ ತೀವ್ರ ತಪಾಸಣೆಗೆ ಒಳಗಾಗಬೇಕೆಂಬ ಕಠಿಣ ನಿಯಮವನ್ನೂ ಸಹ ಜಾರಿಗೊಳಿಸಲಾಗಿದೆ.
ಪ್ರಧಾನಿ ಮೋದಿ ಅವರು ಸಾರ್ವಜನಿಕರೊಂದಿಗಿನ ಸಂಪರ್ಕವನ್ನು ಆದಷ್ಟೂ ಕಡಿಮೆ ಮಾಡಬೇಕು. ಸಾರ್ವಜನಿಕ ಸಭೆ-ಸಮಾರಂಭಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂದು ಸಲಹೆ ಮಾಡಿರುವ ಮೂಲಗಳು, ಉದ್ದೇಶಿತ ರೋಡ್ ಶೋಗಳ ವೇಳೆ ಪ್ರಧಾನಿ ಜೀವಕ್ಕೆ ದೊಡ್ಡ ಮಟ್ಟದ ಆತಂಕವಿದೆ ಎಂಬ ಅಂಶವನ್ನೂ ಉಲ್ಲೇಖಿಸಿವೆ. ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯಗಳ ಭೇಟಿ ವೇಳೆ ಎಸ್‍ಪಿಜಿ ವಿಶೇಷ ಭದ್ರತೆಯೊಂದಿಗೆ ಅರೆ ಸೇನಾ ಪಡೆ ಮತ್ತು ಸ್ಥಳೀಯ ಪೊಲೀಸರ ಹೆಚ್ಚುವರಿ ರಕ್ಷಣಾ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಚುನಾವಣಾ ಪ್ರಚಾರದ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಮಾನವ ಬಾಂಬ್ ದಾಳಿ ಮೂಲಕ ಹತ್ಯೆ ಮಾಡಿದ ರೀತಿಯಲ್ಲೇ ಪ್ರಧಾನಿ ಮೋದಿ ಅವರನ್ನು ಕೊಲ್ಲಲ್ಲು ದೊಡ್ಡ ಮಟ್ಟದಲ್ಲಿ ಸಂಚು ನಡೆದಿದೆ ಎಂದು ಪುಣೆ ಪೊಲೀಸರು ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿದ್ದರು.
Comments