ಅಂತೂ ಇಂತೂ ಮೊಹಮ್ಮದ್ ನಲಪಾಡ್ ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ವಿದ್ವತ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಮೊಹಮ್ಮದ್ ನಲಪಾಡ್ ಗೆ ಅಂತು ಇಂತೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಿನ್ನೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟು, ತೀರ್ಪನ್ನು ಗುರುವಾರಕ್ಕೆ ಮುಂದೂಡಲಾಗಿತ್ತು.
ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ 116 ದಿನಗಳ ಜೈಲುವಾಸಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ.. 2 ಲಕ್ಷ ರೂ ಬಾಂಡ್ ನ ಎರಡು ಶ್ಯೂರಿಟಿ, ಪಾಸ್ ಪೋರ್ಟ್ ಅನ್ನು ಕೋರ್ಟಿಗೆ ಒಪ್ಪಿಸುವಂತೆ ಷರತ್ತು ವಿಧಿಸಿ ಜಾಮೀನನ್ನು ನೀಡಲಾಗಿದೆ. ವಕೀಲ ಬಿ ವಿ ಆಚಾರ್ಯ ನಲಪಾಡ್ ಪರ ವಾದ ಮಂಡಿಸಿದ್ದರು. ಜಾಮೀನಿಗಾಗಿ ಹಲವು ಸೆಷೆನ್ಸ್ ಕೋರ್ಟಿನಲ್ಲಿ ನಲಪಾಡ್ ಪರ ಅರ್ಜಿಯನ್ನು ಸಲ್ಲಿಸಲಾಗಿತ್ತಾದರೂ, ಎಲ್ಲಾ ಅರ್ಜಿಗಳನ್ನೂ ವಜಾಗೊಳಿಸಲಾಗಿತ್ತು. ಆದರೆ ಇದೀಗ ಷರತ್ತುಬದ್ದ ಜಾಮೀನು ನೀಡಿರುವ ಹೈಕೋರ್ಟ್, ಯಾವುದೇ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ಎಲ್ಲೂ ಹೋಗುವಂತಿಲ್ಲ ಎಂದು ತಿಳಿಸಿದೆ.
Comments