ಆನಂದ್ ಅಪ್ಪುಗೋಳ್ರವರ ವಾಹನಗಳನ್ನು ಸೀಜ್ ಮಾಡಿದ ಪೊಲೀಸರು..!

ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರು ಸಾರ್ವಜನಿಕರಿಗೆ ವಂಚನೆ ಮಾಡಿದ ಕೇಸ್ನಲ್ಲಿ ಆನಂದ್ ಅಪ್ಪುಗೋಳ್ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
33 ಲಕ್ಷ ರೂ ಮೌಲ್ಯದ ಫಾರ್ಚುನರ್, ಇನ್ನೋವಾ ಹಾಗೂ ಕ್ವಾಲಿಸ್ ಕಾರು, 7.85 ಲಕ್ಷ ಮೌಲ್ಯದ ವಿವಿಧ ಕಂಪೆನಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 41.35 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಕೂಡ ಇವರ ವಿರುದ್ಧ ವಂಚನೆಯ ಪ್ರಕರಣಗಳು ದಾಖಲಾಗಿದ್ದವು ಅದರೊಂದಿಗೆ ಚಿತ್ರದಲ್ಲಿ ದುಡಿದ ಕೆಲವರಿಗೆ ಸರಿಯಾಗಿ ಪೇಮೆಂಟ್ ಮಾಡಿಲ್ಲ ಎನ್ನುವ ಆರೋಪ ಕೂಡ ಆನಂದ್ ಅಪ್ಪುಗೋಳ್ ಮೇಲಿತ್ತು.
Comments