ಗಂಡಂದಿರೇ ಹುಷಾರ್..!ಹೆಂಡತಿಯರನ್ನು ಬೈಯುವ ಮುನ್ನ ಎಚ್ಚರ..

30 May 2018 2:45 PM | Crime
573 Report

ಮದುವೆಯಾದ ಮೇಲೆ ಸಾಮಾನ್ಯವಾಗಿ ಗಂಡ ಹೆಂಡತಿಯ ಮಧ್ಯೆ ಜಗಳ ಬಂದೆ ಬರುತ್ತದೆ. ಕೆಲವೊಮ್ಮೆ ಅದು ವಿಚ್ಛೇದನ ಹಂತಕ್ಕೂ ಹೋಗಬಹುದೇನೋ… ಸುಮ್ ಸುಮ್ನೆ ಯಾವುದೋ ವಿಷಯಕ್ಕೆ ಜಗಳ ಆಡಿಕೊಂಡು ವಿಚ್ಚೇಧನವನ್ನು ತೆಗೆದುಕೊಳ್ಳುತ್ತಾರೆ. ಮಹೇಂದ್ರಗರ್ ಪ್ರದೇಶದಲ್ಲಿ ತನ್ನ ಗಂಡನಿಂದ ವಿಚ್ಚೇಧನವನ್ನು ತೆಗೆದುಕೊಂಡಿದ್ದಾಳೆ. ಕಾರಣ ಏನ್ ಗೊತ್ತಾ? ಮುಂದೆ ಓದಿ

ಗಂಡಂದಿರು ಇನ್ನುಮುಂದೆ ನಿಮ್ಮ ನಿಮ್ಮ ಹೆಂಡತಿಗೆ ಬಯ್ಯುವ ಮುನ್ನ ಸ್ವಲ್ಪ ಎಚ್ಚರ ವಹಿಸಿ. ಆಕೆಯ ಬಣ್ಣದ ಬಗ್ಗೆ ತೆಗಳುವ ಮುನ್ನ ಸ್ವಲ್ಪ ಯೋಚನೆ ಮಾಡಿ. ಏಕೆಂದರೆ ನೀವು ಆಕೆಯನ್ನು ಕಪ್ಪು - ಕರಿ ಎಂದು ಕರೆದ್ರೆ ಆದಲ್ಲಿ ದುಷ್ಕೃತ್ಯ ಹಾಗೂ ಕ್ರೌರ್ಯ ಎಸಗಿರುವ ಅಪರಾಧದ ಅಡಿಯಲ್ಲಿ ನಿಮಗೆ ವಿಚ್ಛೇದನವನ್ನು ನೀಡಬಹುದು ಎಂಬ ಆದೇಶವನ್ನು ಹೊರಡಿಸಿದೆ.ಈ ರೀತಿ ಹರ್ಯಾಣ ಮತ್ತು ಪಂಜಾಬ್ ಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಮಹೇಂದ್ರ ಗರ್ ಪ್ರದೇಶದ ಮಹಿಳೆಯೋರ್ವರು, ಆಕೆಯ ಗಂಡ ಬಣ್ಣದ ಬಗ್ಗೆ ತೆಗಳಿರುವುದಕ್ಕಾಗಿ  ಕೋರ್ಟ್ ಮೆಟ್ಟಿಲೇರಿದ್ದರು. ಎಲ್ಲರ ಮುಂದೆಯೆ ಆಕೆಯ ಬಣ್ಣದ ಬಗ್ಗೆ ತೆಗಳುತ್ತಿದ್ದನು. ಅಲ್ಲದೇ ಬಣ್ಣ ಕಪ್ಪೆಂದು ಮನೆಗೂ ಕೂಡ ಸೇರಿಸುತ್ತಿರಲಿಲ್ಲ ಎಂದು ಮಹಿಳೆ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.ಈ ಸಂಬಂಧವಾಗಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಎಂ.ಎಂ. ಎಸ್. ಬೇಡಿ ನೇತೃತ್ವದ ನ್ಯಾಯಪೀಠ ಆಕೆ ಮಾನಸಿಕವಾಗಿ ಹೆಚ್ಚು ನೋವನ್ನು ಅನುಭವಿಸಿದ್ದಾರೆ. ಬಣ್ಣದ ಬಗ್ಗೆ ಹೀಯಾಳಿಸಿದರೆ ಗಂಡನಿಗೆ ವಿಚ್ಛೇದನ ನೀಡಬಹುದು ಎಂಬ ಆದೇಶವನ್ನು ನೀಡಿದೆ.

 

Edited By

Manjula M

Reported By

Manjula M

Comments