ನಲಪಾಡ್‍ಗೆ ಜೈಲಾ, ಬೇಲಾ? ಇಂದು ಆದೇಶ ಹೊರಡಿಸಲಿರುವ ಕೋರ್ಟ್..!
ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಪಬ್‍ನಲ್ಲಿ ಗೂಂಡಾಗಿರಿ ನಡೆಸಿದ ಆರೋಪಕ್ಕೆ ಸಂಬಂಧಪಟ್ಟಂತೆ ಕಳೆದ 100 ದಿವಸಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಲ್ಲಿರುವ ನಲಪಾಡ್ ಗೆ ಇಂದು ನಿರ್ಣಾಯಕ ದಿನವಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಜಾಮೀನು ಅರ್ಜಿ ಸಂಬಂಧವಾಗಿ ಇಂದು ಬೆಂಗಳೂರಿನ 66ನೇ ಸಿಟಿ ಸಿವಿಲ್ ಕೋರ್ಟ್ ಆದೇಶವನ್ನು ನೀಡಲಿದೆ. ಈ ಆದೇಶದ ಮೇರೆಗೆ ಮಹಮ್ಮದ್ ನಲಪಾಡ್ ಜಾಮೀನು ಪಡೆದು ಇಂದು ಹೊರಗೆ ಬರ್ತಾನೋ ಇಲ್ಲವೋ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ದಿನ ಜೈಲಿನಲ್ಲೆ ಇರಬೇಕೋ ಅನ್ನೋದು ಇಂದು ನ್ಯಾಯಾಲಯ ನೀಡುವ ಆದೇಶದ ಮೇಲೆ ಎಲ್ಲವೂ ತಿಳಿಯಲಿದೆ.
Comments