ಮಕ್ಕಳ ಕಳ್ಳನೆಂದು ಭಾವಿಸಿ ಯುವಕನ ಹತ್ಯೆಗೈದ ಸ್ಥಳಿಯರು

ಮಕ್ಕಳ ಕಳ್ಳುರು ಬಂದಿದ್ದಾರೆ ಎಂಬ ವದಂತಿ ಎಲ್ಲಾ ಕಡೆ ಹರಡುತ್ತಿದೆ.ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ಯುವಕನೊಬ್ಬನನ್ನು ಗುಂಪೊಂದು ಹೊಡೆದು ಸಾಯಿಸಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.
ಉದ್ಯೋಗ ಹುಡುಕಿಕೊಂಡು ಬಂದ ರಾಜಸ್ಥಾನದ ನಿವಾಸಿ ಕಾಲೂರಾಮ್ ಬಚಾನ್ರಾಮ್ ಕೆಲ ತಿಂಗಳುಗಳ ಹಿಂದೆ ರಾಜಧಾನಿಗೆ ಬಂದಿದ್ದರು ಎಂದು ತಿಳಿಸಲಾಗಿದೆ. ಕಾಲೂರಾಮ್ ರನ್ನು ಮಕ್ಕಳ ಕಳ್ಳ ಎಂದು ಭಾವಿಸಿದ ಗುಂಪು ರಂಗನಾಥ ಥಿಯೇಟರ್ ವರೆಗೆ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಚೆನ್ನಾಗಿಯೇ ಥಳಿಸಿದೆ. ಇಷ್ಟೇ ಅಲ್ಲದೆ ಗಂಭೀರವಾಗಿ ಗಾಯಗೊಂಡಿದ್ದ ಕಾಲೂರಾಮ್ ರ ಕಾಲಿಗೆ ಹಗ್ಗ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ. ಹಲ್ಲೆ ದೃಶ್ಯವನ್ನು ನೋಡಿದ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಆತತನ್ನು ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದು, ಅಷ್ಟರಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ
Comments