ರಸ್ತೆ ಅಪಘಾತ-ಕನ್ನಡದ ಹೆಸರಾಂತ ನಿರೂಪಕ ಇನ್ನಿಲ್ಲ..!

24 May 2018 9:45 AM | Crime
481 Report

ಖಾಸಗಿ ವಾಹಿನಿಯಲ್ಲಿ ತುಂಬಾ ವರ್ಷಗಳಿಂದ ನಿರೂಪಕರಾಗಿದ್ದ ಚಂದನ್ [ಚಂದ್ರಶೇಖರ್ ] ದಾವಣಗೆರೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಚಂದನ್ ಹಾಗೂ ಸಂತೋಷಿ ಇಬ್ಬರೂ ಕೂಡ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಈ ವೇಳೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಂದನ್ ಉದಯ ಮ್ಯೂಸಿಕ್, ಕಸ್ತೂರಿ ಸೇರಿದಂತೆ ವಿವಿಧ ಖಾಸಗಿ ವಾಹಿನಿಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು. ಅತ್ಯಂತ ಸುಲಲಿತವಾಗಿ ಕನ್ನಡ ಮಾತನಾಡುತ್ತಿದ್ದರು. ದಾವಣಗೆರೆಯ ಹನಗವಾಡಿಯ ಸೇತುವೆ ಬಳಿ ಈ ಪ್ರಕರಣ ನಡೆದಿದ್ದು ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 

Edited By

Manjula M

Reported By

Manjula M

Comments