ನಟಿ ಸುಷ್ಮಿತಾ ಸೇನ್‌ಗೆ 15 ವರ್ಷದ ಬಾಲಕನಿಂದ ಲೈಂಗಿಕ ಕಿರುಕುಳ.!

23 May 2018 11:40 AM | Crime
655 Report

ಮಾಜಿ ಭುವನ ಸುಂದರಿ ಹಾಗೂ ಬಾಲಿವುಡ್‌ ನಟಿ ಸುಷ್ಮಿತಾ ಸೇನ್‌, ಇತ್ತೀಚೆಗೆ 15 ವರ್ಷದ ಬಾಲಕನಿಂದ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದಾಗಿದ್ದೇನೆ ಎಂಬುದನ್ನು ತಿಳಿಸಿದ್ದಾರೆ.

ಮಹಿಳಾ ಸುರಕ್ಷತೆ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಷ್ಮಿತಾ ಸೇನ್‌, 'ಆರು ತಿಂಗಳ ಹಿಂದೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವೊಂದರಲ್ಲಿ ನಾನು ಪಾಲ್ಗೊಂಡಿದ್ದೆ. ಆಗ 15 ವರ್ಷದ ಬಾಲಕನೊಬ್ಬ ಎಲ್ಲರ ಎದುರಿನಲ್ಲೇ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡ ಎಂದು ಹೇಳಿದ್ದಾರೆ. ನಾನು ಆತನ ಕೈಗಳನ್ನು ಹಿಡಿದು, ಆತನನ್ನು ತಡೆದೆ. ಆದರೆ ಆತ ನಾನೇನೂ ಮಾಡಿಲ್ಲ ಎಂದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಈ ವೇಳೆ ಕೊರಳಪಟ್ಟಿಹಿಡಿದು ಹೊರಗೆ ಕರೆದುಕೊಂಡು ಹೋಗಿ, ನಿನ್ನ ಕೃತ್ಯದ ಬಗ್ಗೆ ನಾನು ಇಲ್ಲಿ ಗದ್ದಲ ಮಾಡಿದರೆ, ನಿನ್ನ ಕಥೆ ಅಷ್ಟೇ, ಮುಗಿದೇ ಹೋಗುತ್ತದೆ ಎಂದು ಬೆದರಿಸಿದೆ. ಆತ ಬಳಿಕ ತಪ್ಪು ಒಪ್ಪಿಕೊಂಡ. ಮುಂದೆ ಹೀಗೆ ಮಾಡುವುದಿಲ್ಲ ಎಂದು ಮಾತುಕೊಟ್ಟ' ಎಂದು ಸುಷ್ಮಿತಾ ಸೇನ್‌ ತಿಳಿಸಿದ್ದಾರೆ.

 

Edited By

Manjula M

Reported By

Manjula M

Comments