ನಟಿ ಶ್ರೀದೇವಿಯ ಸಾವಿನ ಸುತ್ತಾ…ಅನುಮಾನದ ಹುತ್ತ?

ಬಾಲಿವುಡ್ ನಟಿ ಶ್ರೀದೇವಿ ಫೆಬ್ರವರಿ 24 ರಂದು ದುಬೈ ನ ಹೋಟೆಲ್ ವೊಂದರಲ್ಲಿ ಬಾತ್ ಟಬ್ ನಲ್ಲಿ ಮುಳುಗಿ ಸಾವನಪ್ಪಿದ್ದು ಎಲ್ಲರಿಗೂ ತಿಳಿದೆ ಇದೆ. ಇದೀಗ ಶ್ರೀದೇವಿ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಸೃಷ್ಟಿಯಾಗುತ್ತಿವೆ.
ನಟಿ ಶ್ರೀದೇವಿ ಅವರದ್ದು ಸಹಜ ಸಾವಲ್ಲ ಅದು ಕೊಲೆ ಎಂಬ ಅನುಮಾನ ಹುಟ್ಟಿಕೊಂಡಿರುವ ಹಿನ್ನಲೆಯಲ್ಲಿ ಬಾಲಿವುಡ್ ನಿರ್ಮಾಪಕರೊಬ್ಬರು ಶ್ರೀದೇವಿ ಸಾವಿನ ತನಿಖೆ ಕೋರಿ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಕೂಡ ಯಾವುದೆ ಪ್ರಯೋಜನವಾಗಲಿಲ್ಲ. ನಂತರ ದೆಹಲಿಯ ನಿವೃತ್ತ ಸಹಾಯಕ ಪೊಲೀಸ್ ಕಮೀಷನರ್ ವೇದ್ ಭೂಷಣ್ ಎಂಬವರು, ಶ್ರೀದೇವಿಯದು ಆಕಸ್ಮಿಕ ಸಾವಲ್ಲ ಅದೊಂದು ಪೂರ್ವನಿಯೋಜಿತವಾದ ಕೊಲೆಯಾಗಿದೆ. ತಾವು ಇದರ ತನಿಖೆಗಾಗಿ ದುಬೈಗೆ ತೆರಳಿದ್ದು, ಶ್ರೀದೇವಿ ತಂಗಿದ್ದ ಹೋಟೆಲ್ ರೂಂ ನ ಪಕ್ಕದ ರೂಂ ನಲ್ಲಿ ತಂಗಿ ಕೆಲವೊಂದು ಸಾಕ್ಷಾಧಾರಗಳನ್ನು ಪರಿಶೀಲಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಅವರು ಈ ಬಗ್ಗೆ ಸ್ಪೋಟಕ ಸುದ್ದಿಯೊಂದನ್ನು ಹೊರಹಾಕಿದ್ದಾರೆ. ಶ್ರೀದೇವಿ ಸಾವಿನ ಹಿಂದೆ ಕುಖ್ಯಾತ ಭೂಗತಪಾತಕಿ ದಾವೂದ್ ಇಬ್ರಾಹಿಂನ ಕೈವಾಡವಿದೆ. ಅಲ್ಲದೇ, ಶ್ರೀದೇವಿ ಹೆಸರಿನಲ್ಲಿ 240 ಕೋಟಿ ರೂಪಾಯಿ ವಿಮೆ ಮಾಡಿಸಲಾಗಿತ್ತು. ಆಕೆಯ ಸಾವಿನ ಬಳಿಕವಷ್ಟೇ ಇದು ಸಂಬಂಧಿಸಿದವರಿಗೆ ಸಿಗುತ್ತಿತ್ತು..ಇದು ಸಹಜ ಸಾವಲ್ಲ,ಕೊಲೆ ಇದರ ತನಿಖೆ ನಡೆಸಬೇಕು ಎಂದಿದ್ದಾರೆ.
Comments