ಮಕ್ಕಳ ಅಪಹರಣ ವದಂತಿ; ಕಂಗಲಾದ ಪೋಷಕರು

14 May 2018 10:07 AM | Crime
372 Report

ಮಕ್ಕಳನ್ನು ಕಿಡ್ಯಾಪ್ ಅಂಗಾಂಗಗಳನ್ನು ಮಾರಿಕೊಳ್ಳುತ್ತಿದ್ದಾರೆ ಎಂಬ ವದಂತಿಯು ಪಾವಗಡ ತಾಲೂಕಿನಲ್ಲಿ ನಡೆದಿದೆ. ಇದರಿಂದ ಪೋಷಕರು ರಾತ್ರಿಯಿಡಿ ನಿದ್ದೆಗೆಟ್ಟು ಮಕ್ಕಳನ್ನು ಕಾಯುವಂತಾಗಿದೆ.

ಅಷ್ಟೆ ಅಲ್ಲದೆ ಅಪರಿಚಿತ ವ್ಯಕ್ತಿಗಳು ಗ್ರಾಮಕ್ಕೆ ಬರದಂತೆ ನೋಡಿಕೊಳ್ಳುತ್ತಿದ್ದಾರೆ. ಆಂದ್ರದಿಂದ ಮಕ್ಕಳನ್ನು ಕಿಡ್ನಾಪ್  ಮಾಡುವ ತಂಡವೊಂದು ಪಾವಗಡಕ್ಕೆ ಆಗಮಿಸಿದೆ ಎಂದು ವದಂತಿ ಹಡಿದಾಡುತ್ತಿದೆ. ಮಕ್ಕಳನ್ನು ಕಿಡ್ನಿ ಹೃದಯವನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ವಾಟ್ಸಾಪ್, ಫೇಸ್ ಬುಕ್'ಗಳ ಮೂಲಕ ಹರಿದಾಡುತ್ತಿದೆ.ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ರಾತ್ರಿ ಯುವತಿಯೊಬ್ಬಳು ಕಾಣೆಯಾಗಿದ್ದಾಳೆ. ಬಹಿರ್ದೆಸೆಗೆ ತೆರಳಿದ್ದ ಪೊನ್ನಸಮುದ್ರ ಗ್ರಾಮದ ಯುವತಿಯೊಬ್ಬಳು ನಾಪತ್ತೆಯಾಗಿದ್ದು ಜನರು ಮತ್ತಷ್ಟು ಕಂಗಾಲಾಗಿದ್ದಾರೆ. ಪಳ್ಳವಳ್ಳಿ, ಪೊನ್ನಸಮುದ್ರ, ದೊಡ್ಡಹಳ್ಳಿ, ಕೆ.ರಾಂಪುರ ಸೇರಿದ್ದಂತೆ ಗಡಿ ಭಾಗದ ಹಳ್ಳಿಗಳಲ್ಲಿ ಜನರು ತಮ್ಮ ಮಕ್ಕಳನ್ನು ಹೊರಗೆ ಹೋಗಲು ಬಿಡುತ್ತಿಲ್ಲ. ಪಾವಗಡ ಪ್ರದೇಶದಲ್ಲಿ ಪೋಷಕರು ಕಂಗಲಾಗಿರೋದಂತು ಸುಳ್ಳಲ್ಲ.

Edited By

Manjula M

Reported By

Manjula M

Comments