ಪ್ರಕಾಶ್ ರೈ ಮತ್ತು ಜಿಗ್ನೇಶ್ ಮೇನಾವಿ ವಿರುದ್ದ ಎಫ್ ಐ ಆರ್

ಯಾವುದೇ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ ಕಾರಣಕ್ಕೆ ನಟ ಪ್ರಕಾಶ್ ರೈ ಹಾಗೂ ಗುಜರಾತ್ ಪಕ್ಷೇತರ ಶಾಸಕರಾದ ಜಿಗ್ನೇಶ್ ಮೇವಾನಿ ವಿರುದ್ಧ ಚಿಕ್ಕ ಮಗಳೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮೇ 03 ರಂದು ಅಂಡೇ ಛತ್ರದ ಬಳಿ ಸಂವಿಧಾನದ ಉಳಿವಿಗಾಗಿ ಕರ್ನಾಟಕ, ಸ್ವಾಭಿಮಾನಿ ಸಮಾವೇಶ ಮತ್ತು ಹೋರಾಟ ಗೀತೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರವನ್ನು ಕುವೆಂಪು ಕಲಾ ಮಂದಿರದಲ್ಲಿ ನಡೆಸಲು ಅನುಮತಿಯನ್ನು ಕೋರಿದ್ದರು, ಆದರೆ ಜಿಲ್ಲಾಡಳಿತವು ಯಾವುದೇ ರೀತಿಯ ಅನುಮತಿ ನೀಡಿರಲಿಲ್ಲ. ಅನುಮತಿ ಇಲ್ಲದೆ ಕಾರ್ಯಕ್ರಮವನ್ನು ನಡೆಸಿದ್ದಕ್ಕಾಗಿ ನಟ ಪ್ರಕಾಶ್ ರೈ, ಶಾಸಕ ಮೇವಾನಿ ಸೇರಿದಂತೆ ಇನ್ನೂ 15 ಮಂದಿ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
Comments