ಹೊಳೆನರಸೀಪುರ: ಹಂಗರಹಳ್ಳಿಯ ಜನರ ಮೇಲೆ ಲಾಠಿ ಚಾರ್ಚ್!

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಂಗರಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಬಾಗೂರು ಮಂಜೇಗೌಡ ಗ್ರಾಮಕ್ಕೆ ಬರದಂತೆ ಗ್ರಾಮಸ್ಥರು ತಡೆ ಹಿಡಿದಿದ್ದಾರೆ. ಮಂಜೇಗೌಡರು ಯಾವುದೇ ಕಾರಣಕ್ಕೂ ಗ್ರಾಮಕ್ಕೆ ಬರಬಾರದು ಎಂದು ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಂದು ನೂರಾರು ಪೊಲೀಸರ ಬೆಂಗಾವಲಿನಲ್ಲಿ ಮತ ಕೇಳಲು ಬಾಗೂರು ಮಂಜೇಗೌಡ ಆಗಮಿಸಿದ್ದರು. ಈ ವೇಳೆ ಮಂಜೇಗೌಡನಿಗೆ ಗ್ರಾಮಸ್ಥರಿಂದ ಹಾಗೂ ಜೆಡಿಎಸ್ ಕಾರ್ಯಕರ್ತರಿಂದ ಮುತ್ತಿಗೆ ಹಾಕಿ ನಿಂದನೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ವಾಕ್ಸಮರ ನಡೆದಿದ್ದು, ಪೋಲಿಸರು ಸ್ಥಳದಲ್ಲಿದವರನ್ನು ಹತೋಟಿಗೆ ತರುವುದಕ್ಕೆ ಲಾಠಿ ಚಾರ್ಚ್ ನಡೆಸಿದ್ದಾರೆ ಎಂದು ತಿಳಿಸಲಾಗಿದೆ. ಘಟನೆ ನಡೆದ ಜಾಗದಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗಿದ್ದು, ಹಿರಿಯ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವುದಕ್ಕೆ ಹರ ಸಾಹಸ ಪಟ್ಟಿದ್ದಾರೆ ಎಂದು ತಿಳಿಸಲಾಗಿದೆ.
Comments