ಮತ್ತೊಮ್ಮೆ ಖಳನಟನಾದ ಕಿನ್ನರಿ ಧಾರವಾಹಿಯ ಹೀರೋ ನಕುಲ್..!
ಇತ್ತಿಚಿಗಷ್ಟೆ ಕಿನ್ನರಿ ಧಾರವಾಹಿ ಹೀರೋ ಮೇಲೆ ಕಿರುಕುಳ ದೂರು ನೀಡಿದ್ದ ಯಾಸ್ಮಿನ್ ಅವರೇ ಇದೀಗ ಮತ್ತೊಂದು ದೂರು ದಾಖಲಿಸಿದ್ದಾರೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶ ಕೊಡಿಸ್ತೀನಿ ಎಂದು ಕಿರಣ್ ರಾಜ್ ನನ್ನ ಬಳಿ ಪಾಸ್ ಪೋರ್ಟ್ ಪಡೆದಿದ್ದನು.
ಆದರೆ ಈಗ ಪಾಸ್ ಪೋರ್ಟ್ ನೀಡದೆ ಕಿರಣ್ ರಾಜ್ ಮತ್ತು ಆತನ ಕುಟುಂಬ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಯಾಸ್ಮಿನ್ ಆರೋಪಿಸಿದ್ದಾರೆ.ಯಾಸ್ಮಿನ್ ಅವರು ವಿದೇಶಕ್ಕೆ ಚಿತ್ರೀಕರಣಕ್ಕೆಂದು ಹೋಗಬೇಕಿತ್ತು. ಹಾಗಾಗಿ ಕಿರಣ್ ಬಳಿ ತನ್ನ ಪಾಸ್ ಪೋರ್ಟ್ ಕೇಳಿದ್ದಾರೆ. ಆದರೆ ಕಿರಣ್ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾನೆ. ಕಿರಣ್ ರಾಜ್ ಪಾಸ್ ಪೋರ್ಟ್ ಕೊಡದ ಹಿನ್ನಲೆಯಲ್ಲಿ ಕೆಲಸ ಕೈ ತಪ್ಪಿದೆ ಎಂದು ಯಾಸ್ಮಿನ್ ಆರೋಪದಲ್ಲಿ ತಿಳಿಸಿದ್ದಾರೆ. ಕಿರಣ್ ರಾಜ್ ವಿರುದ್ಧ 420, 506, 384 ಸೆಕ್ಷನ್ ಅಡಿಯಲ್ಲಿ ರಾಜಾರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
Comments