ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಹ್ಯಾರಿಸ್ ಪುತ್ರ

ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜೈಲಿನಲ್ಲಿ ಬಂಧಿಯಾಗಿರುವ ಶಾಸಕ ಹ್ಯಾರೀಸ್ ಮಗ ನಲಪಾಡ್ ಇದೀಗ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಜಾಮೀನು ಅರ್ಜಿಯಲ್ಲಿ ನಲಪಾಡ್ ಪರ ವಕೀಲರು ಸ್ಥಳೀಯ ಹಾಗೂ ಹೈಕೋರ್ಟ್ ನಲ್ಲಿ ನನ್ನ ಕಕ್ಷಿದಾರರು ಜಾಮೀನು ಅರ್ಜಿ ವಜಾಗೊಂಡು 60 ದಿನವಾದ್ರೂ ಘಟನೆ ಸಂಬಂಧ ಪೋಲಿಸರು ಇಲ್ಲಿ ತನಕ ಜಾರ್ಜ್ ಶೀಟ್ ಸಲ್ಲಿಸದ ಕಾರಣ ಜಾಮೀನು ನೀಡುವಂತೆ ನಲಪಾಡ್ ಪರ ವಕೀಲರು ಅರ್ಜಿಯನ್ನು ಸಲ್ಲಿಸಿದ್ದಾರೆ. ವಿದ್ವತ್ ಪರ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ಅಭಿಯೋಜಕರಾಗಿರುವ ಖ್ಯಾತ ವಕೀಲ ಶ್ಯಾಮ್ ಸುಂದರ್ ಆದರೆ ನಲಪಾಡು ಜಾಮೀನು ಅರ್ಜಿಗೆ ಸಂಬಂಧಪಟ್ಟಂತೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕಾನೂನು ಪ್ರಕಾರ 90 ದಿನಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬಹುದಾಗಿದೆ. ಹಾಗಾಗಿ ಬೇಗ ಚಾರ್ಜ್ ಶೀಟ್ ಸಲ್ಲಿಸುವಂತೆ ತನಿಖಾ ಅಧಿಕಾರಿಗಳಿಗೆ ಒತ್ತಡ ಹೇರುವಂತಿಲ್ಲ. ಅಧಿಕಾರಿಗಳು ಮೇ 18ರೊಳಗೆ ಯಾವಾಗ ಬೇಕಾದರೂ ಜಾರ್ಜ್ ಶೀಟ್ ಸಲ್ಲಿಸಬಹುದು ಅನ್ನೋದು ಶ್ಯಾಮ್ ಸುಂದರ್ ಅವರ ವಾದವಾಗಿದೆ. ಮೇ 11 ರವರೆಗೆ ನಲಪಾಡ್ ಗೆ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಸ್ತರಿಸಿತ್ತು. ಹೀಗಾಗಿ ಈ ನಲಪಾಡ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
Comments