ಪವನ್ ಕಲ್ಯಾಣ್ ವಿರುದ್ಧ ಎಫ್‌ಐಆರ್ ದಾಖಲು
ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಮಾಧ್ಯಮವನ್ನು ನಿಂದಿಸಿದ ಆರೋಪಡಿಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಪವನ್ ಕಲ್ಯಾಣ್ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಕಾಲ್ ಮಾಡಿ ಅವಮಾನಕರ ಪದಗಳಿಂದ ನಿಂದಿಸಿದ್ದ ಹಿನ್ನಲೆಯಲ್ಲಿ ಆ ಮಾಧ್ಯಮದ ನಿರ್ದೇಶಕರು ಹೈದರಾಬಾದ್ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಪವನ್ ಕಲ್ಯಾಣ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಪವನ್ ಕಲ್ಯಾಣ್ ಟ್ವಿಟರ್ ನಲ್ಲಿ ಮಾಡಿದ್ದ ಕಾಮೆಂಟ್ ಗಳು, ಖಾಸಗಿ ಟಿವಿ ಚಾನಲ್ ನ ಸಿಇಒ, ಉದ್ಯೋಗಿಗಳನ್ನು ನಿಂದಿಸಿದ ಆಡಿಯೋ ಸಾಕ್ಷ್ಯಗಳನ್ನು ಪೊಲೀಸರಿಗೆ ಈಗಾಗಲೇ ನೀಡಿದ್ದು, ಇವುಗಳನ್ನು ಪರಿಶೀಲಿಸಿದ ಪೊಲೀಸರು ಪವನ್ ಕಲ್ಯಾಣ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
Comments