ಡ್ರಗ್ಸ್ ದಂಧೆಯಲ್ಲಿ ತಲೆಮರೆಸಿಕೊಂಡಿದ್ದ ನಟಿಗೆ ಮತ್ತೊಂದು ಶಾಕ್ !

ಡ್ರಗ್ಸ್ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿಯಾದ ಮಮತಾ ಕುಲಕರ್ಣಿ ಆಸ್ತಿ ವಶಕ್ಕೆ ತೆಗೆದುಕೊಳ್ಳುವಂತೆ ಥಾಣೆಯ ವಿಶೇಷ ಕೋರ್ಟ್ ಆದೇಶವನ್ನು ಹೊರಡಿಸಿದೆ.
ಬರೋಬ್ಬರಿ 2000 ಕೋಟಿ ರೂ. ಮೊತ್ತದ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಮಮತಾ ಕುಲಕರ್ಣಿ ಮತ್ತು ಡ್ರಗ್ಸ್ ಮಾಫಿಯಾ ಕಿಂಗ್ ವಿಕ್ಕಿ ಗೋಸ್ವಾಮಿ ತಲೆಮರೆಸಿಕೊಂಡಿದ್ದಾರೆ.2016 ರಲ್ಲಿ ಸೊಲ್ಲಾಪುರದ ಏವೋನ್ ಲೈಫ್ ಸೈನ್ಸಸ್ ಕಂಪನಿ ಆವರಣದಲ್ಲಿ 2000 ಕೋಟಿ ರೂ. ಮೌಲ್ಯದ 18.5 ಟನ್ ಎಫೆಡ್ರಿನ್ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಮಮತಾ ಕುಲಕರ್ಣಿ ಹೆಸರು ಕೂಡ ಕೇಳಿ ಬಂದಿತ್ತು. ಮಮತಾ ಕುಲಕರ್ಣಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ವಿಚಾರಣೆಗೆ ಕೂಡ ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಕಾರಣದಿಂದ ಮಮತಾ ಕುಲಕರ್ಣಿಗೆ ಸೇರಿದ ವಿವಿಧ ಕಡೆಗಳಲ್ಲಿನ ಆಸ್ತಿಯನ್ನು ವಶಪಡಿಸಿಕೊಳ್ಳುವಂತೆ ಕೋರ್ಟ್ ಆದೇಶವನ್ನು ಹೊರಡಿಸಿದೆ.
Comments