ದೇಶದ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿಯಲ್ಲಿ ಈ ನಟನ ಹೆಸರು ಇದೆ..!

ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿಯು ತನ್ನದೇ ಆದ ಅಧಿಕೃತ ವೆಬ್‌ಸೈಟ್‌ನಲ್ಲಿ ದೇಶದಲ್ಲಿರುವ ಪ್ರಮುಖ 39 ಮಂದಿ ಕುಖ್ಯಾತ ವನ್ಯಜೀವಿ ಅಪರಾಧಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಹೆಸರು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಹುಲಿ ಬೇಟೆ, ಇತರ ಪ್ರಾಣಿಗಳ ದೇಹಗಳ ಕಳ್ಳಸಾಗಾಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೆ ಒಳಗಾದ 38 ಪ್ರಮುಖ ಅಪರಾಧಿಗಳ ನಂತರ ಸಲ್ಮಾನ್ ಖಾನ್ ಅವರ ಹೆಸರಿದೆ. ಈ ಬಗ್ಗೆ ಮಾತನಾಡಿರುವ ಮಂಡಳಿಯ ಹೆಚ್ಚುವರಿ ನಿರ್ದೇಶಕ ತಿಲೋತ್ತಮ ವರ್ಮಾ, 'ಈ ಹಿಂದೆ ನಡೆದಿರುವ ಹಾಗೂ ಸದ್ಯದ ವನ್ಯಜೀವಿ ಅಪರಾಧ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸುವ ಸಲುವಾಗಿ ದಾಖಲೆ ಬಿಡುಗಡೆ ಮಾಡಲಾಗಿದೆ. ಇದು ಅಪರಾಧಿಗಳ ಚಲನವಲನದ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ' ಎಂದು ತಿಳಿಸಿದ್ದಾರೆ.
Comments