ನೀತಿ ಸಂಹಿತೆ ಉಲ್ಲಂಘನೆ ಮೇರೆಗೆ ಹ್ಯಾರಿಸ್ ವಿರುದ್ಧ ದೂರು

ವಿಧಾನ ಸಭಾ ಚುನಾವಣಾಯ ಹಿನ್ನಲೆಯಲ್ಲಿ ನೀತಿ ಸಂಹಿತೆಯನ್ನು ಜಾರಿಗೆ ತರಲಾಗಿತ್ತು. ಆದರೂ ಕೂಡ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಎನ್.ಎ.ಹ್ಯಾರಿಸ್ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚುನಾವಣಾ ಸಂಚಾರ ದಳದ ಅಧಿಕಾರಿ ನೀಡಿದ ದೂರಿನ ಮೇರೆಗೆ ಹ್ಯಾರಿಸ್ ವಿರುದ್ಧ ಎಫ್‌ಐಆರ್ ಈಗಾಗಲೇ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏ.23 ರಂದು ಹ್ಯಾರಿಸ್ ತಮ್ಮ ಬೆಂಬಲಿಗರ ಜತೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಧ್ವನಿ ವರ್ಧಕವನ್ನು ಬಳಸಿದ್ದರು. ಧ್ವನಿ ವರ್ಧಕ ಬಳಕೆಗೆ ಯಾವುದೇ ಅನುಮತಿಯನ್ನು ಕೂಡ ಪಡೆದಿರಲಿಲ್ಲ. ವಾಹನ ತಡೆದ ಚುನಾವಣಾ ಸಂಚಾರ ದಳದ ಅಧಿಕಾರಿ ಧ್ವನಿ ವರ್ಧಕ ತೆರವುಗೊಳಿಸಿ ದೂರು ನೀಡಿದ್ದರು. ಅವರು ನೀಡಿದ ದೂರಿನ ಮೇರೆಗೆ ವಾಹನ ಜಪ್ತಿಗೊಳಿಸಿ ವಾಹನದ ಮಾಲೀಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments