ಡ್ರಗ್ಸ್ ಸಾಗಿಸುವಾಗ ಸಿಕ್ಕಿ ಬಿದ್ದ ಕ್ರಿಕೆಟ್ ಆಟಗಾರ್ತಿ

ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬಳು 14000 ಮೆಥಾಂಫೆಟಮೈನ್ ಮಾತ್ರೆಗಳನ್ನು ಇಟ್ಟುಕೊಟ್ಟು ಹೋಗುವಾಗ ಸಿಕ್ಕಿಬಿದ್ದಿದ್ದಾಳೆ. ಆಕೆಗೆ ಜೀವಾವಧಿ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ನಜ್ರೀನ್ ಖಾನ್ ಮುಕ್ತಾ, ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಕೂಡ ಆಕೆ ಆಡಿದ್ದಳು.
ಮ್ಯಾಚ್ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಚಿತ್ತಗಾಂಗ್ ಬಳಿ ಆಟಗಾರ್ತಿಯರಿದ್ದ ಬಸ್ ತಡೆದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಜ್ರೀನ್ ಬಳಿ 14,000 ಮಾತ್ರೆಗಳು ಸಿಕ್ಕಿವೆ. ಕೆಫೀನ್ ಜೊತೆಗೆ ಮಿಕ್ಸ್ ಮಾಡಿಕೊಂಡು ನಜ್ರೀನ್ ಮೆಥಾಂಫೆಟಮೈನ್ ಮಾತ್ರೆಗಳನ್ನು ಸೇವಿಸುತ್ತಿದ್ದಳು ಎಂದು ತಿಳಿದುಬಂದಿದೆ.ಡ್ರಗ್ಸ್ ಸಾಗಣೆ ಆರೋಪದ ಮೇಲೆ ಆಟಗಾರ್ತಿ ವಿರುದ್ಧ ಕೇಸ್ಅನ್ನು ಕೂಡ ಈಗಾಗಲೇ ದಾಖಲಿಸಲಾಗಿದೆ. ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಕೂಡ ಇದೆ. ಕಾಕ್ಸ್ ಬಜಾರ್, ಮಯನ್ಮಾರ್ ಗಡಿಯಲ್ಲಿದೆ. ಅಲ್ಲಿಂದ್ಲೇ ಮೆಥಾಂಫೆಟಮೈನ್ ಮಾತ್ರೆಗಳು ಯಬ ಎಂಬ ಹೆಸರಲ್ಲಿ ಬಾಂಗ್ಲಾಕ್ಕೆ ಅಕ್ರಮವಾಗಿ ಸಾಗಣೆಯಾಗುತ್ತವೆ ಎಂದು ಹೇಳಲಾಗಿದೆ.
Comments