ಐಪಿಎಲ್ ಬೆಟ್ಟಿಂಗ್ ನಿಂದ ಪ್ರಾಣ ಕಳೆದುಕೊಂಡ ಯುವಕ

ಕಳೆದ ವಾರಗಳಿಂದಷ್ಟೆ ಐಪಿಎಲ್ ಶುರುವಾಗಿದೆ. ಐಪಿಎಲ್ ವೇಳೆ ಸಾಕಷ್ಟು ಜನ ಬೆಟ್ಟಿಂಗ್ ಕಟ್ಟಿ ದುಡ್ಡು ಮಾಡಿಕೊಳ್ಳೋಕೆ ನೋಡ್ತಾರೆ. ಆದರೆ ಬೆಟ್ಟಿಂಗ್ ನಿಂದಾನೆ ಕೆಲವೊಂದು ಬಾರಿ ಅನಾಹುತಗಳು ನಡೆದು ಹೋಗುತ್ತವೆ.
ಇಂತಹುದೆ ಘಟನೆಯೊಂದು ಹೆಚ್.ಎಸ್.ಆರ್ ಲೇಔಟ್ ಬಳಿಯಿರುವ ಹೊಟೇಲ್ ಪ್ರಶಾಂತ್ ನಲ್ಲಿ ನಡೆದಿದೆ. ಐಪಿಎಲ್ ಬೆಟ್ಟಿಂಗ್ ಕಟ್ಟಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಯೋಗೀಶ್ (30) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮೃತ ದುರ್ದೈವಿ. ಹೆಚ್.ಎಸ್.ಆರ್ ಲೇಔಟ್ ಬಳಿಯಿರುವ ಹೊಟೇಲ್ ಪ್ರಶಾಂತ್ ನಲ್ಲಿ ಒಂದು ರೂಮನ್ನು ಬಾಡಿಗೆ ಪಡೆದು ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂ. ಗಳನ್ನು ಕಳೆದುಕೊಂಡು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದನು ಎಂದು ತಿಳಿದುಬಂದಿದೆ. ಈ ಬಗ್ಗೆ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
Comments