ಶ್ರೀರೆಡ್ಡಿಗೆ ಟಾಂಗ್ ಕೊಟ್ಟಿದ್ದ ಕವಿತಾಗೆ ಜೀವ ಬೆದರಿಕೆ
ಇತ್ತಿಚಿಗೆ ಬಣ್ಣದ ಲೋಕದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇದರ ಬಗ್ಗೆ ಸಾಕಷ್ಟು ಪರ ವಿರೋಧಗಳು ಕೂಡ ಕೇಳಿ ಬರುತ್ತಿವೆ.
ಇತ್ತಿಚೆಗೆ ಶ್ರೀ ರೆಡ್ಡಿ ಕೂಡ ಈ ಕಾಸ್ಟಿಂಗ್ ಕೌಚ್ ವಿರುದ್ದ ಸಾಕಷ್ಟು ಹೋರಾಡುತ್ತಿದ್ದಾರೆ. ಇದರ ಬೆನ್ನಲೆ ಶ್ರೀರೆಡ್ಡಿಗೆ ಟಾಂಗ್ ನೀಡಿದ್ದ ಸ್ಯಾಂಡಲ್ ವುಡ್ ನಟಿ ಕವಿತಾಗೆ ಜೀವ ಬೆದರಿಕೆ ಹಾಕಲಾಗಿದೆ. ಈಗಾಗಲೇ ಅಪಲೋಡ್ ಮಾಡಿರುವ ವಿಡಿಯೋವನ್ನು ತೆಗೆದು, ಕ್ಷಮೆಯಾಚಿಸುವ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡುವಂತೆ ಧಮ್ಕಿ ಹಾಕಿದ್ದಾರೆ ಎಂದು ಕವಿತಾ ತಿಳಿಸಿದ್ದಾರೆ. ಟಾಲಿವುಡ್ ನಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಶ್ರೀರೆಡ್ಡಿ ಅವರನ್ನು ಅನುಕರಿಸಿ ಅವಕಾಶಕ್ಕಾಗಿ ಈ ರೀತಿಯ ಹೀನಾ ಕೃತ್ಯಗಳನ್ನು ಮಾಡಬಾರದು ಎಂದು ಕವಿತಾ ಕೂಡ ಹೇಳಿದ್ದರು. ಹಾಗಾಗಿ ಕವಿತಾ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ವಾಟ್ಸಪ್ ಮತ್ತು ಇಂಟರ್ ನೆಟ್ ಕರೆಗಳು ಬಂದಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಇಂದು ಕವಿತಾ ನಗರ ಪೊಲೀಸ್ ಆಯಕ್ತರ ಕಚೇರಿಯಲ್ಲಿರುವ ಸೈಬರ್ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.
Comments