ಈ ಪಾಪಿ ತಂದೆ ತನ್ನ ಮಗಳನ್ನೆ ಸ್ನೇಹಿತರಿಗೆ ಗಿಫ್ಟ್ ಆಗಿ ಕೊಟ್ಟಿದ್ದಾನೆ..!

ತಂದೆಯೇ ತನ್ನ 35 ವರ್ಷದ ಮಗಳನ್ನು ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿ ಗ್ಯಾಂಗ್‍ರೇಪ್ ಮಾಡಿಸಿದ ಘಟನೆ ಸೋಮವಾರ ಉತ್ತರಪ್ರದೇಶದ ಲಕ್ನೋದಿಂದ ಸಿತಾಪುರ್ ನಲ್ಲಿ ನಡೆದಿದ್ದು, ಇದೀಗ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 15ರಂದು 50 ವರ್ಷದ ವ್ಯಕ್ತಿ ತನ್ನ ಮಗಳನ್ನು ಜಾತ್ರೆಗೆಂದು ಕಮಲಾಪುರಕ್ಕೆ ಕರೆದುಕೊಂಡು ಹೋಗಿದ್ದಾನೆ. ಜಾತ್ರೆಗೆ ಹೋಗಿ ಹಿಂತಿರುಗುವಾಗ ಆತ ತನ್ನ ಸ್ನೇಹಿತ ಮನ್ ಸಿಂಗ್‍ಗೆ ಕರೆ ಮಾಡಿ ಭೇಟಿಯಾಗಲು ತಿಳಿಸಿದ್ದಾನೆ. ನಂತರ ಮಗಳನ್ನು ತನ್ನ ಸ್ನೇಹಿತರ ಜೊತೆ ಬರುವಂತೆ ಮನವೊಲಿಸಿ, ತನ್ನ ಮತ್ತೊಬ್ಬ ಸ್ನೇಹಿತ ಮೀರಜ್ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ . ಬಳಿಕ ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಹಿಳೆಯನ್ನು ಮೀರಜ್ ಮನೆಯಲ್ಲಿ 18 ಗಂಟೆಗಳ ಕಾಲ ಕೂಡಿಹಾಕಿ ಅತ್ಯಾಚಾರವೆಸಗಿದ್ದಾರೆ. ನಂತರ ಮಹಿಳೆ ಸೋಮವಾರ ರಾತ್ರಿ ಅಲ್ಲಿಂದ ತಪ್ಪಿಸಿಕೊಂಡು ಬಂದು, ತನ್ನ ತಾಯಿಯ ಹತ್ತಿರ ನಡೆದ ಘಟನೆ ವಿವರವಾಗಿ ತಿಳಿಸಿದ್ದಾಳೆ. ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‍ಐಆರ್ ಕೂಡ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments