ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆ

ನೀರು ತರಲು ಕಲ್ಲುಬಾವಿಗೆ ತೆರಳಿದ ಮಹಿಳೆಯು ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗಿನ ಜಾವ ಮೂಡಿಗೆರೆ ತಾಲೂಕಿನ ಕಳಸದಲ್ಲಿ ನಡೆದಿದೆ.
ಮೃತರನ್ನು ಕಳಸ ನಿವಾಸಿ ಜಯಶ್ರೀ(35) ಎಂದು ಈಗಾಗಲೇ ಗುರುತಿಸಿದ್ದು,ಇವರು ಎಂದಿನಂತೆ ಇಂದು ಬೆಳಗ್ಗಿನ ಜಾವ 5:30ರ ಸುಮಾರಿಗೆ ನೀರು ತರಲೆಂದು ಕಲ್ಲುಬಾವಿಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಈ ವೇಳೆ ಬಾವಿಯ ಮೆಟ್ಟಿಲ ಬಳಿ ಕಾಲುಜಾರಿ ಬಿದ್ದುದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.. ಬಿದ್ದ ವೇಳೆ ತಲೆಗೆ ಕಲ್ಲು ತಾಗಿ ಗಂಭೀರ ಗಾಯಗೊಂಡ ಜಯಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಕಳಸ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Comments