ಬೆಳ್ಳಂಬೆಳ್ಳಿಗೆ ಜವರಾಯನ ಅಟ್ಟಹಾಸ
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸಾನ್ ನದಿಯ ಬಳಿ ಮಿನಿ ಟ್ರಕ್ ವೊಂದು ಉರುಳಿರುವ ಪರಿಣಾಮ 21 ಜನರು ಮೃತರಾದ ದುರ್ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.ಈ ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.
ಇನ್ನೂ ಅನೇಕರು ವಾಹನದೊಳಗೇ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಲೆ ಇದೆ. ಈ ಟ್ರಕ್ ಸಿಂಗ್ರೌಲಿ ಜಿಲ್ಲೆಯಿಂದ ಹೊರಟು ಸಿಧಿ ಜಿಲ್ಲೆಯಲ್ಲಿ ದುವೆ ಕಾರ್ಯಕ್ರಮವೊಂದಕ್ಕೆ ಜನರನ್ನು ಕೊಂಡೊಯ್ಯುತ್ತಿತ್ತು ಎಂದು ತಿಳಿದು ಬಂದಿದೆ.ಚಾಲಕನ ನಿಯಂತ್ರಣ ತಪ್ಪಿ ಸುಮಾರು 60-70 ಅಡಿ ಎತ್ತರದಿಂದ ನದಿ ದಂಡೆಯ ಮೇಲೆ ಬಿದ್ದಿದ್ದರಿಂದ ಈ ಘಟನೆಯು ಸಂಭವಿಸಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
Comments