ರ‍್ಯಾಪಿಡ್ ರಶ್ಮಿಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಬೆದರಿಕೆ ಕರೆ

ರಾಜರಥ ಸಿನಿಮಾ ತಂಡದ ವಿವಾದತ್ಮಕ ಹೇಳಿಕೆಯ ಹಿನ್ನಲೆಯಲ್ಲಿ ನಿರೂಪಕಿ ಮತ್ತು ಆರ್ ಜೆ ರ‍್ಯಾಪಿಡ್ ರಶ್ಮಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿರುಕುಳ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಬೆದರಿಕೆಗಳು ಬಂದಿವೆ ಎಂದು ರ‍್ಯಾಪಿಡ್ ರಶ್ಮಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ರಾಜರಥ ತಂಡದ ಜೊತೆ ಸಂದರ್ಶನ ಮಾಡುವ ವೇಳೆ ಸಿನಿಮಾ ನೋಡದವರು ಎಂದು ಪ್ರಶ್ನೆ ಕೇಳಿದ್ದಾರೆ. ರಾಜರಥ ಸಿನೆಮಾ ನೋಡದವರನ್ನು ಅವಾಚ್ಯ ಶಬ್ಧಗಳಿಂದ ಬಂಡಾರಿ ಬ್ರದರ್ಸ್ ನಿಂದಿಸಿದ್ದರು ಕೂಡ ವಿಷಯ ನಿಮಗೆ ಈಗಾಗಲೇ ತಿಳಿದೆ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಕೂಡ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಈ ಘಟನೆ ಸಂಬಂಧ ರ‍್ಯಾಪಿಡ್ ರಶ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸರಿಗೂ ದೂರು ನೀಡಿದ್ದಾರೆ.
Comments