ಪರ್ತಕರ್ತೆ ಗೌರಿ ಲಂಕೇಶ್ ಹತ್ಯೆ- ಆರೋಪಿ ನವೀನ್ ಗೆ ಮಂಪರು ಪರೀಕ್ಷೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಯಾಗಿ ಬಂಧಿತನಾಗಿರುವ ಕೆ.ಟಿ.ನವೀನ್ ಕುಮಾರ್ ನನ್ನು ಸದ್ಯದಲ್ಲಿಯೇ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೇಸಿನ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಗುಜರಾತ್ ನ ವಿಧಿವಿಜ್ಞಾನ ಪ್ರಯೋಗಾಲಯವು ಮಂಪರು ಪರೀಕ್ಷೆಗೆ ಒಳಪಡಿಸಲು ಅವಧಿಯನ್ನು ಈಗಾಗಲೇ ನೀಡಿದೆ.ನವೀನ್ ಕುಮಾರ್ ಗೆ ಮಂಪರು ಪರೀಕ್ಷೆಗೊಳಪಡಿಸಲು ಸಮಯ ಕೋರಿ ವಿಶೇಷ ತನಿಖಾ ತಂಡವು ಗುಜರಾತ್ ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪತ್ರವನ್ನು ಕೂಡ ಬರೆದಿದ್ದರು. ವಿಧಿವಿಜ್ಞಾನ ಪ್ರಯೋಗಾಲಯವು ನಮ್ಮ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದು ಏಪ್ರಿಲ್ 15ರಿಂದ 30ರೊಳಗೆ ಯಾವಾಗಲಾದರೂ ಆರೋಪಿಯನ್ನು ಕರೆತರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.. ನವೀನ್ ಕುಮಾರ್ ನನ್ನು ಸದ್ಯದಲ್ಲಿಯೇ ಗುಜರಾತ್ ಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ಈಗಾಗಲೆ ತಿಳಿಸಿದ್ದಾರೆ.
Comments