ಟಿಪ್ಪರ್'ಗೆ ಕಾರ್ ಡಿಕ್ಕಿ- ಓವರ್ ಟೇಕ್ ನಿಂದ ಇಬ್ಬರ ಸಾವು

14 Apr 2018 4:49 PM | Crime
588 Report

ಓವರ್ ಟೇಕ್ ಮಾಡುವ ಸಮಯದಲ್ಲಿ ವೇಗವಾಗಿ ಚಲಿಸಿದ ಕಾರು ಎದುರಿಗೆ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶ್ರೀ ರಂಗಪಟ್ಟಣದ ರಾಜ್ಯ ಹೆದ್ದಾರಿಯ ಗೊಲ್ಲಹಳ್ಳಿ ಬಳಿ ಇಂದು ಸಂಭವಿಸಿದೆ.

ತುಮಕೂರು ಮೂಲದ ಶಭಾನ್(50), ಹಜ್ಮಲ್ (35) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೆಲಸದ ವಿಷಯವಾಗಿ ಬಳ್ಳಾರಿಗೆ ತೆರಳಿದ ವೇಳೆಯಲ್ಲಿ ಇಂದು ಬೆಳಗಿನ ಜಾವ 6.30ರ ಸಮಯದಲ್ಲಿ ತುಮಕೂರಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮುಂದೆ ಚಲಿಸುತ್ತಿದ್ದ ವಾಹನವನ್ನು ಓವರ್ಟೇಕ್ ಮಾಡಲು ಹೋಗಿ ಚಾಲಕ ನಿಯಂತ್ರಣ ತಪ್ಪಿ ಎದುರಿಗೆ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆಸಿದ್ದಾನೆ.ಈ ಸಮಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರಿಗೆ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By

Manjula M

Reported By

Manjula M

Comments