ಗರ್ಭಿಣಿ ಗಾಯಕಿಗೆ ಗುಂಡಿಕ್ಕಿ ಹತ್ಯೆ, ಕಾರಣ ಕೇಳುದ್ರೆ ಶಾಕ್ ಆಗ್ತೀರಾ?

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದ ಭಾರೀ ಜನಸಂಖ್ಯೆ ನೆರೆದಿದ್ದ ಸಂಗೀತ ಪ್ರದರ್ಶನವೊಂದರಲ್ಲಿ ನಿಂತುಕೊಂಡು ಹಾಡಲಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿದ್ದಾನೆ.
ಕಂಗಾ ಗ್ರಾಮದಲ್ಲಿ ಮಂಗಳವಾರ ಸಂಜೆ ವೇಳೆಗೆ ಸಂಗೀತ ಕಾರ್ಯಕ್ರಮ ನಡೆಯುತಿತ್ತು. ಆ ಕಾರ್ಯಕ್ರಮದಲ್ಲಿ ಆರು ತಿಂಗಳ ಗರ್ಭಿಣಿ ಸಮೀನಾ ಸಮೂನ್ ಅವರು ಕಾರ್ಯಕ್ರಮವನ್ನು ನೀಡುತ್ತಿದ್ದರು. ಈ ಸಂದರ್ಭ ತಾರಿಖ್ ಅಹ್ಮದ್ ಜತೋಯಿ ಎಂಬಾತ ಸಮೀನಾಗೆ ನಿಂತುಕೊಂಡು ಹಾಡುವಂತೆ ಒತ್ತಾಯಿಸಿದ್ದನು. ಅದಕ್ಕೆ ಅವರು ಆಗುವುದಿಲ್ಲ ಎಂದು ನಿಲ್ಲಲು ನಿರಾಕರಿಸಿದ್ದರು.ಆದರೆ, ಇತರರು ಸಹಕರಿಸಿದ ಬಳಿಕ ಆಕೆ ಎದ್ದು ನಿಲ್ಲುತ್ತಿದ್ದಂತೆ, ಕುಡಿದ ಮತ್ತಿನಲ್ಲಿದ್ದ ತಾರಿಖ್ ತನ್ನಲ್ಲಿದ್ದ ರಿವಾಲ್ವರ್ ತೆಗೆದು ಆಕೆಯ ಹಣೆಯ ಮೇಲೆ ಗುಂಡಿಕ್ಕಿದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋ ಈಗ ಬಹಿರಂಗಗೊಂಡಿದ್ದು, ಎಲ್ಲೆಡೆ ಪ್ರಸಾರವಾಗಿದೆ. ಪೊಲೀಸರು ಈಗಾಗಲೇ ಆರೋಪಿಯನ್ನು ಕೂಡ ಬಂಧಿಸಿದ್ದಾರೆ
Comments