ಹಿಟ್ ಅಂಡ್ ರನ್ ಗೆ ಇಬ್ಬರು ಯುವಕರು ಸಾವು

10 Apr 2018 9:44 AM | Crime
491 Report

ಬೆಂಗಳೂರಿನ ಹೊರವಲಯದಲ್ಲಿರುವ ಬ್ಯಾಡರಹಳ್ಳಿಯ ಮುದ್ದಿನ ಪಾಳ್ಯದಲ್ಲಿ ಹಿಟ್ ಅಂಡ್ ರನ್ ಗೆ ಇಬ್ಬರು ಬಲಿಯಾಗಿದ್ದಾರೆ.

ಯುವಕರು ಬ್ಯಾಡರಹಳ್ಳಿ ವಿಘ್ನೇಶ್ವರ ನಗರದವರಾಗಿದ್ದು ಉಮೇಶ್(20) ಮತ್ತು ಗೌತಮ್(20) ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಒಂದೆ ಪಲ್ಸರ್ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಲಾರಿ ಪಲ್ಸರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By

Manjula M

Reported By

Manjula M

Comments