ಬಿಗ್ ಬ್ರೇಕಿಂಗ್ ನ್ಯೂಸ್ : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ತು 30ಕೋಟಿಗೂ ಅಧಿಕ ಚಿನ್ನ…!!




2017-18 ಸಾಲಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲೆತ್ನಿಸಿದ 100 ಕೆ.ಜಿ. ಚಿನ್ನಾಭರಣಗಳನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 30 ಕೋಟಿಗೂ ರೂ. ಅಧಿಕವಾಗಿದೆ.
ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದ 34 ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಭರಣ ವಶಪಡಿಸಿಕೊಂಡಿದ್ದಾರೆ. ಮಧ್ಯ ಏಷ್ಯಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಜೋರ್ಡಾನ್, ಶ್ರೀಲಂಕಾ ಮತ್ತು ದಕ್ಷಿಣ ಏಷ್ಯಾದ ಸ್ಮಗ್ಲರ್ಸ್ ಇದೀಗ ಜೈಲಿನಲ್ಲಿದ್ದಾರೆ. ಬಟ್ಟೆ, ಕೊರಿಯರ್, ಬೆಲ್ಟ್ ಬಕಲ್, ಚಪ್ಪಲಿ, ಚಾಕಲೇಟ್, ಸೋಪ್,ಒಳಉಡುಪು ಮತ್ತು ಮಣ್ಣು ಮಿಶ್ರಿತ ಪುಡಿ ಹೀಗೆ ವಿವಿಧ ರೂಪಗಳಲ್ಲಿ ವಿಮಾನ ನಿಲ್ದಾಣದ ಮೂಲಕ ಸ್ಮಗ್ಲಿಂಗ್ ನಡೆಸುವ ಕಸ್ಟಮ್ಸ್ ಅಧಿಕಾರಿಗಳಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
Comments