ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿದ ಬಾಲಿವುಡ್ ನಟ

ಇತ್ತೀಚೆಗೆ ಬಾಲಿವುಡ್ ನಟರು ತಮ್ಮ ಸೂಪರ್ ಬೈಕ್ಗಳಲ್ಲಿ ಹೆಲ್ಮೆಟ್ ಇಲ್ಲದೇ ಸಾರ್ವಜನಿಕವಾಗಿ ರೈಡಿಂಗ್ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ನಟ ಕುನಾಲ್ ಖೆಮು ಕೂಡಾ ನಿನ್ನೆಯಷ್ಟೇ ದುಬಾರಿ ಬೆಲೆಯ ಎಂವಿ ಅಗಸ್ಟಾ ಬ್ರುಟಾಲೆ ಬೈಕ್ನಲ್ಲಿ ಜಾಲಿ ರೈಡ್ ಮಾಡುತ್ತಿದ್ದರು.
ಅಸಲಿಗೆ ಕುನಾಲ್ ಖೆಮು ರೈಡ್ ಮಾಡುತ್ತಿದ್ದ ಎಂವಿ ಅಗಸ್ಟಾ ನಟ ಸೈಫ್ ಅಲಿಖಾನ್ ಅವರಿಗೆ ಸೇರಿದ ಸೂಪರ್ ಬೈಕ್ ಎನ್ನಲಾಗಿದ್ದು, ಹೊಸ ಬೈಕ್ ಖರೀದಿ ಹಿನ್ನೆಲೆ ಕುನಾಲ್ ಖೆಮು ಕೂಡಾ ಒಂದು ರೌಂಡ್ ಹೊರಗೆ ಬಂದಿದ್ದರು. ಇದು ಪರ ವಿರೋಧಕ್ಕೆ ಕಾರಣವಾಗಿ ಕೆಲವರು ಮುಂಬೈ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಆಗ ಎಚ್ಚೆತ್ತುಕೊಂಡ ಪೊಲೀಸರು ಆದ ಪ್ರಮಾದಕ್ಕೆ ದಂಡ ಪಾವತಿಸುವಂತೆ ಇ ಚಲನ್ ಜಾರಿಗೊಳಿಸಿದ್ದಾರೆ. ಇ ಚಲನ್ ಮೂಲಕ ನಟ ಕುನಾಲ್ ಖೆಮುಗೆ ರೂ. 500 ದಂಡ ಹಾಕಲಾಗಿದ್ದು, ಇದಕ್ಕೆ ಟ್ವಿಟರ್ ಮೂಲಕವೇ ಉತ್ತರಿಸಿರುವ ಕುನಾಲ್ ಖೆಮು 'ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿದ್ದು ಕಾನೂನು ಪ್ರಕಾರ ತಪ್ಪು, ನೀವು ತೆಗೆದುಕೊಂಡಿರುವ ಕ್ರಮಕ್ಕೆ ನಾನು ಬದ್ಧ ಎಂದಿದ್ದಾರೆ.
Comments