ಶಾಕಿಂಗ್! RBI ಗೆ ನಕಲಿ ನೋಟು ಕಳಿಸಿದ SBI ಬ್ಯಾಂಕ್ ಮ್ಯಾನೇಜರ್

ನಕಲಿ ನೋಟುಗಳನ್ನು ಗ್ರಾಹಕರಿಂದ ಪಡೆದು ಅದನ್ನು ಆರ್.ಬಿ.ಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ)ಗೆ ಕಳಿಸಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ. ಆರ್.ಬಿ.ಐ ಕಾನ್ಪುರ ಶಾಖೆಯ ಮ್ಯಾನೇಜರ್ ಸತಿ ಕುಮಾರ್ ನೀಡಿದ ದೂರಿನ ಅನ್ವಯ ಎಫ್ ಐ ಆರ್ ದಾಖಲಿಸಲಾಗಿದೆ.
1000 ಹಾಗೂ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಗ್ರಾಹಕರಿಂದ ಪಡೆದು ಅದನ್ನು ಆರ್.ಬಿ.ಐ ಗೆ ಕಳಿಸಿರುವುದಾಗಿ ಆರೋಪಿ ಕೂಡ ಒಪ್ಪಿಕೊಂಡಿದ್ದಾನಂತೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ದೋಷಗಳಿಗೆ ಇದೊಂದು ನಿದರ್ಶನ. 12,500 ಕೋಟಿ ರೂಪಾಯಿ ವಂಚಿಸಿರುವ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯಂತಹ ಉದ್ಯಮಿಗಳಿಗೆ ಕೂಡ ಬ್ಯಾಂಕ್ ಅಧಿಕಾರಿಗಳೇ ಸಹಕರಿಸಿದ್ದು ಕೂಡ ಬಯಲಾಗಿತ್ತು.
Comments