ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಟ್ವಿಸ್ಟ್ ಕೊಡಲು ಹೋಗಿ ತಾವೇ ಹಳ್ಳಕ್ಕೆ ಬಿದ್ದ ಡಾ.ಆನಂದ್
ಇತ್ತೀಚಿಗೆ ನಡೆದ ವಿದ್ವತ್ ಮೇಲಿನ ಹಲ್ಲೆ ಪ್ರಕರಣ ಮತ್ತಷ್ಟು ತಿರುವುಗಳನ್ನು ಪಡೆದು ಕೊಳ್ಳುತ್ತಿದ್ದು. ಬಗೆದಷ್ಟೂ ಬಯಲಾಗುತ್ತಿರುವ ಆರೋಪಿ ಮೊಹಮ್ಮದ್ ನಲಪಾಡ್ ನ ಕೃತ್ಯಗಳು. ಎಷ್ಟು ಭಾರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು ಸಹ ಜಾಮೀನು ಸಿಗದೇ ಜೈಲಿನಲ್ಲೇ ಕಾಲ ಕಳೆಯುತ್ತಿರುವ ನಲಪಾಡ್ ನನ್ನು ಬಂಧನದಿಂದ ವಿಮುಕ್ತಿ ಮಾಡಲು ಹೋಗಿ ಮಲ್ಯ ಆಸ್ಪತ್ರೆಯ ಸರ್ಜನ್ ಡಾ.ಆನಂದ ತಾವೇ ಬಂಧನಕೊಳಗಾಗುವ ದುಸ್ಥಿತಿ ಎದುರಾಗಿದೆ.
ಹೌದು ವಿದ್ವತ್ ಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಆನಂದ ವೈದ್ಯಕೀಯ ವರದಿ ತಿರುಚಿದ ಕಾರಣಕ್ಕೆ ಇದೀಗ ಬಂಧನ ಭೀತಿ ಎದುರಿಸುತ್ತಿದ್ದು, ತಮ್ಮ ಸಹೋದರನ ಪ್ರೇಮಕ್ಕೆ ಬಲಿಯಾದ ಡಾ.ಆನಂದ ಸಿಸಿಬಿ ಪೊಲೀಸರಿಗೆ ಅತಿಥಿಯಾಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿದೆ. ಮಲ್ಯ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಆನಂದ ಬಂಧನಕ್ಕೆ ಸಿಸಿಬಿ ಸಜ್ಜಾಗಿದ್ದು, ಯಾವುದೇ ಸಂದರ್ಭದಲ್ಲೂ ಆನಂದನನ್ನು ಸಿಸಿಬಿ ವಶಕ್ಕೆ ಪಡೆಯಲಿದೆ. ವಿದ್ವತ್ ಗೆ ಟ್ರಿಟ್ಮೆಂಟ್ ನೀಡಿದ್ದ ಡಾ.ಆನಂದ, ಟ್ರಿಟ್ಮೆಂಟ್ ವೇಳೆಯಲ್ಲೇ ಕಾಂಗ್ರೆಸ್ ಎಮ್.ಎಲ್.ಎ ಹ್ಯಾರೀಸ್ ಜೊತೆ ಕೈಜೋಡಿಸಿ,ಬಲವಂತವಾಗಿ ಇನ್ನು ಗುಣಮುಖನಾಗದ ವಿದ್ವತ್ ನನ್ನು ಡಿಸ್ಚಾರ್ಜ್ ಮಾಡಿಸಿ ವಿದ್ವತ್ ಚೆನ್ನಾಗಿಯೇ ಇದ್ದಾರೆ ಯಾವುದೇ ತೊಂದರೆಗಳಿಲ್ಲವೆಂದು ಎಂದು ಸುಳ್ಳು ಮೆಡಿಕಲ್ ರಿಪೋರ್ಟ್ ನೀಡಿದ್ದ ಆನಂದ ಆ ರಿಪೋರ್ಟ್ ನನ್ನು ಎಮ್ಎಲ್ಎ ಹ್ಯಾರಿಸ್ ಗೆ ನೀಡಿದ್ದರು. ಅಷ್ಟೇ ಅಲ್ಲದೆ ಡಿಸ್ಚಾರ್ಜ್ ವರದಿಯಲ್ಲಿ ಯಾವುದೇ ಅಹಿತಕರ ಘಟನೆಗಳಿಂದ ಗಾಯವಾಗಿಲ್ಲ. ವಿದ್ವತ್ ಚೆನ್ನಾಗಿದ್ದರು ಎಂದು ವರದಿ ಬರೆದಿದ್ದರು. ಇದಲ್ಲದೇ ವಿದ್ವತ್ ಗೆ ಜೀವಬೆದರಿಕೆ ಹಾಕಿದ್ದ .ಆನಂದ ಸೂಕ್ತ ಹೇಳಿಕೆ ನೀಡದಂತೆ ತಡೆದಿದ್ದರು. ವಿದ್ವತ್ ಕುಟುಂಬಕ್ಕೂ ಕೂಡ ಈ ಬಗ್ಗೆ ಮಾತನಾಡದಂತೆ ಎಚ್ಚರಿಸಿದ್ದರು.
ಈ ಬಗ್ಗೆ ನಿನ್ನೆ ಹೈಕೋರ್ಟ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ವಿದ್ವತ್ ಪರ ವಕೀಲರು ಇದನ್ನು ಬಹಿರಂಗಪಡಿಸಿದ್ದಾರೆ. ಇನ್ನು ಸಿಸಿಬಿ ಪೊಲೀಸರು ನಿನ್ನೆ ರಾತ್ರಿ ವಿದ್ವತ್ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವಬೆದರಿಕೆ ಹಾಗೂ ವರದಿ ತಿರುಚಿರುವ ಕಾರಣಕ್ಕೆ ಡಾ.ಆನಂದ ರನ್ನು ಬಂಧಿಸಲು ಸಿಸಿಬಿ ಸಜ್ಜಾಗಿದೆ. ಇದಕ್ಕೆಲ್ಲ ಕಾರಣ ಹ್ಯಾರೀಸ್ ಪರವಾಗಿ ಡಾ.ಆನಂದ್ ಕೆಲಸ ಮಾಡಲು ಬದ್ರರ್ ಸೆಂಟಿಮೆಂಟ್ ಕಾರಣ ಎನ್ನಲಾಗುತ್ತಿದ್ದು ,ಡಾ.ಆನಂದ ಸಹೋದರ ನಾಗರಾಜ್ ರೆಡ್ಡಿ ಕಾಂಗ್ರೆಸ್ ಪಕ್ಷದ ದೊಮ್ಮಲೂರಿನ ಅಧ್ಯಕ್ಷರಾಗಿದ್ದಾರೆ. ಇವರನ್ನು ಸಿಎಂ ಸರ್ಕಾರ ಮೈಸೂರು ಮಿನರಲ್ಸ್ಗೆ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಈ ನೇಮಕಕ್ಕೆ ಶಾಸಕ ಹ್ಯಾರೀಸ್ ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಗರಾಜ ರೆಡ್ಡಿ ತಮ್ಮ ತಮ್ಮನ ಮೂಲಕ ಹ್ಯಾರೀಸ್ ಗೆ ಋಣ ತೀರಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಡಾ.ಆನಂದ ವಿದ್ವತ್ ಕೇಸ್ ನಲ್ಲಿ ತಮ್ಮ ಚಾಣಾಕ್ಷತೆ ತೋರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿರೋದಂತು ಸತ್ಯ.
Comments