ಕಾರು ಅಪಘಾತದಲ್ಲಿ ಮೂವರು ಎಂಬಿಎ ವಿದ್ಯಾರ್ಥಿನಿಯರ ದಾರುಣ ಸಾವು
ಕೊಪ್ಪಗೆಟ್ ಬಳಿಯ ನೈಸ್ ರಸ್ತೆ ಬ್ರಿಡ್ಜ್ ಕೆಳಗೆ ಬೆಳಿಗ್ಗೆ 8 ಗಂಟೆಯಲ್ಲಿ ಸಂಭವಿಸಿದೆ. ಈ ಕಾರು ಝೂಮ್ ಸಂಸ್ಥೆಗೆ ಸೇರಿದ ಫೋರ್ಡ್ ಫಿಗೋಗೆ ಸೇರಿದ್ದಾಗಿದೆ. ಮೃತರು ಹಾಗೂ ಗಾಯಾಳುಗಳು ಆಂಧ್ರ ಕೇರಳ ಹಾಗೂ ಜಾರ್ಖಂಡ್ ಮೂಲದವರಾಗಿದ್ದು, ಇವರೆಲ್ಲರೂ ಬೆಂಗಳೂರು ಹೊರವಲಯ ಅನೇಕಲ್ ಪಟ್ಟಣದ ಪ್ರತಿಷ್ಠಿತ ಅಲೆಯನ್ಸ್ ಕಾಲೇಜಿನಲ್ಲಿ ಎಂಬಿಎ ಓದುತ್ತಿದ್ದರು.
ಗುರುವಾರ ಝೂಮ್ ಸಂಸ್ಥೆಯ ಕಾರನ್ನು ಬಾಡಿಗೆಗೆ ಪಡೆದು ಔಟಿಂಗ್ ಹೋಗಿದ್ದರು. ಇಂದು ಕಾಲೇಜಿಗೆ ವಾಪಸ್ ತೆರಳುತ್ತಿದ್ದಾಗ ನೈಸ್ ರಸ್ತೆ ಬ್ರಿಡ್ಜ್ ಕೆಳಗೆ ಕಾರಿನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹರ್ಷ ಶ್ರೀವಾಸ್ತವ ಮತ್ತು ಆಶ್ರಯ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಶ್ರುತಿ ಗೊಟ್ಟಿಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಹುಳಿಮಾವು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments