ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವಶಕ್ಕೆ..!

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನ ಎಸ್‌ಐಟಿ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಪಟ್ಟಂತೆ ಹಿಂದೂಗಳು, ಹಿಂದೂ ದೇವತೆಗಳ ಬಗ್ಗೆ ಗೌರಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಲೆ ತಿಳಿದು ಬಂದಿದೆ ಎನ್ನಲಾಗುತ್ತಿದೆ.
ಇದಲ್ಲದೇ ಹಿಂದುತ್ವಕ್ಕೆ ತಲೆ ಕೊಡೋಕು ಸಿದ್ಧ ತಲೆ ತೆಗೆಯೋಕು ಸಿದ್ಧ ಎಂದು ನವೀನ್ ಕುಮಾರ್ ಹೇಳಿದ್ದನೆಂದು ಹೇಳಲಾಗುತ್ತಿದ್ದೆ. ಗೌರಿ ಲಂಕೇಶ್ ಹತ್ಯೆ ಮಾಡಿದವರು ಯಾರು..? ಯಾರೆಲ್ಲ ಹತ್ಯೆಗೆ ಬಂದಿದ್ದರು ಎಂಬ ಬಗ್ಗೆಯೂ ನವೀನ್ ಬಳಿ ಮಾಹಿತ ಇದೆ ಎಂಬ ಬಗ್ಗೆಯೂ ಎಸ್‌ಐಟಿ ಮಹತ್ವದ ಮಾಹಿತಿ ಕಲೆಹಾಕಿದೆ. ನವೀನ್ ಕುಮಾರ್ ನೀಡುತ್ತಿರುವ ಮಾಹಿತಿ ಪ್ರಕಾರ, ಹಲವು ತಿಂಗಳುಗಳ ಹಿಂದೆಯೇ ಗೌರಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಹಿಂದೂಪರ ಸಂಘಟನೆಗೆ ಸೇರಿದ ನವೀನ್ ಸಹಚರರಾದ ಮೋಹನ್ ಗೌಡ, ಶ್ರೀಕಾಂತ್ ಎಂಬುವವರ ಕೈವಾಡವೂ ಇದೆ ಎಂಬ ಬಗ್ಗೆಯೂ ಎಸ್‌ಐಟಿ ಮಾಹಿತಿ ಕಲೆ ಹಾಕಿದೆ.
Comments