ಜೈಲಲ್ಲೇ ಆತ್ಮ ಹತ್ಯೆ ಮಾಡಿಕೊಂಡು ಕೊನೆಯುಸಿರೆಳೆದ ಸೈಕೋ ಜೈಶಂಕರ್

27 Feb 2018 10:50 AM | Crime
439 Report

ಒಂಟಿ ಸ್ತ್ರೀಯರನ್ನು ಅತ್ಯಾಚಾರಗೈದು ಅಮಾನುಷವಾಗಿ ಕೊಲೆಗೈಯುತ್ತಿದ್ದ ವಿಕೃತಕಾಮಿ ಸೈಕೋ ಕಿಲ್ಲರ್ ಜೈಶಂಕರ್ ಸುಮಾರು ರಾತ್ರಿ 2 ಗಂಟೆಯ ವೇಳೆಯಲ್ಲಿ ಬ್ಲೇಡಿನಿಂದ ತನ್ನ ಕುತ್ತಿಗೆ ಕೊಯ್ದುಕೊಂಡಿದ್ದರಿಂದ ಗಂಭೀರವಾದ ಗಾಯವಾಗಿ, ಜೈಲಿನ ರಕ್ಷಣಾ ಸಿಬ್ಬಂದಿ ವಿಕ್ಟೊರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಮಾರ್ಗ ಮದ್ಯೆ ಕೊನೆಯುಸಿರೆಳೆದಿದ್ದಾನೆ.

2 ವರ್ಷಗಳ ಹಿಂದೆ ಜೈಲಿಂದ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಜೈಶಂಕರನನ್ನ ಹೊಸೂರು ರಸ್ತೆಯ ಕೂಡ್ಲು ಗೇಟ್ ಬಳಿಯ ಸದ್ಗುರು ಸಾಯಿ ಶಾಲೆಯ ಬಳಿ ಬಂಧಿಸಲಾಗಿತ್ತು. ಪರಾರಿಯಾಗಿದ್ದ ಆತನ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿತ್ತು. ಜೈಶಂಕರ್ ನಾಪತ್ತೆಯಾಗಿದ್ದರಿಂದ ರಾಜ್ಯಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ವಿಕೃತ ಕಾಮಿ ಬಗ್ಗೆ ಸುಳಿವು ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಸರ್ಕಾರ ಘೋಷಿಸಿತ್ತು. 24ಕ್ಕೂ ಅಧಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಜೈಶಂಕರ್ ಮೇಲಿವೆ.

 

Edited By

Shruthi G

Reported By

Madhu shree

Comments