ನಲಪಾಡ್ ಹಲ್ಲೆಯ ಬಗ್ಗೆ ರೋಚಕ ಮಾಹಿತಿ ಬಿಚ್ಚಿಟ್ಟ ವಿದ್ವತ್

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನ ಅಧಿಕಾರದ ಅಹಂಕಾರದಿಂದ ಮೆರೆಯುತ್ತಿದ್ದ ಕೇವಲ ಚಿಕ್ಕ ವಿಷಯಕ್ಕೆ ಈ ರೀತಿ ಮಾರಣಾಂತಿಕವಾಗಿ ಹಲ್ಲೆಗೊಳಗಾದ ವಿದ್ವತ್ ಈ ಘಟನೆಯ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ಕಾಲು ಮುರಿದಿದ್ದರಿಂದ ಕಾಲು ಚಾಚಿ ಊಟಕ್ಕೆ ಕೂತಿದ್ದೆ. ಆಗ ಅಲ್ಲಿಗೆ ಬಂದ ಮೊಹಮ್ಮದ್ ಗೆ ನನ್ನ ಕಾಲು ತಾಗಿತ್ತು. ಇದಕ್ಕೆ ಸಾರಿ ಕೇಳುವಂತೆ ಆತ ಒತ್ತಾಯಿಸಿದ. ಆದರೆ ನಾನು ಕೇಳಲಿಲ್ಲ ಎಂದಾಗ ಹ್ಯಾರಿಸ್ ಮಗ ಎಂದು ಗೊತ್ತಿದ್ದೂ ಈ ರೀತಿ ಮಾತನಾಡುತ್ತಿದ್ದೀಯಾ ಎಂದು ಅಬ್ಬರಿಸಿದನಲ್ಲದೆ, ಏಕಾಏಕಿ ಬಿಯರ್ ಬಾಟಲಿಯಿಂದ ಮುಖಕ್ಕೆ ಗುದ್ದಿದ. ಅಲ್ಲದೆ, ಅಲ್ಲಿದ್ದ ಕುರ್ಚಿ ಎಸೆದ. ಏಕಾ ಏಕಿ ತನ್ನ ಬೌನ್ಸರ್ ಗಳಿಂದ ಹಲ್ಲೆ ಮಾಡಿಸಿದ. ಆಗ ನಾನು ಸಾರಿ ಸಾರಿ ಎಂದು ಹೇಳಿದರೂ ಕೇಳದೇ ಮಾರಣಾಂತಿಕವಾಗಿ ಹೊಡೆದ ಎಂದು ವಿದ್ವತ್ ವಿವರಿಸಿದ್ದಾರೆ.
Comments