ಜಮಖಂಡಿ ಜೆಡಿಎಸ್ ಅಭ್ಯರ್ಥಿಯ ಕಚೇರಿ ಮೇಲೆ ವಾಮಾಚಾರ ಪ್ರಯೋಗ..!!

ಜೆಡಿಎಸ್ ಅಭ್ಯರ್ಥಿ ತೌಫಿಕ್ ಪಾರ್ಥನಹಳ್ಳಿ ಅವರ ಪಕ್ಷದ ಕಚೇರಿಗೆ ವಾಮಾಚಾರ ಮಾಡಿಸಿ, ಅದನ್ನು ಶಟರ್ ಗೆ ಕಟ್ಟಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ವಿವಿಧ ರೀತಿಯ ಅನುಮಾನಕ್ಕೆ ಕಾರಣವಾಗಿದ್ದು, ಆರೋಪಗಳು ಕೇಳಿಬಂದಿವೆ.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ಒಂದು ನಿಂಬೆಹಣ್ಣು ಕೊಯ್ದು, ಅದರಲ್ಲಿ ಕುಂಕುಮ ಹಚ್ಚಿ, ಕೆಲ ಚೀಟಿಗಳನ್ನು ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಜೆಡಿಎಸ್ ಸೇರಿದ್ದ ತೌಫಿಕ್ ಪಾರ್ಥನಹಳ್ಳಿ ಅವರನ್ನು ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ಚುನಾವಣೆಗಾಗಿ ಅವರು ಸಹ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಭಾನುವಾರ ರಾತ್ರಿ ಅವರ ಕಚೇರಿಗೆ ಯಾರೋ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕಟ್ಟಿದ್ದು, ಸೋಮವಾರ ಬೆಳಗ್ಗೆ ಕಚೇರಿ ಬಾಗಿಲು ತೆಗೆಯುವಾಗ ಕಂಡು ಬಂದಿದೆ. ಜೆಡಿಎಸ್ ಅಭ್ಯರ್ಥಿ ತೌಫಿಕ್ ಅವರು ಕೆಲಸದ ನಿಮಿತ್ತ ಬೆಂಗಳೂರಗೆ ತೆರಳಿದ್ದು, ಇತ್ತ ಜಮಖಂಡಿಯಲ್ಲಿ ಅವರ ಕಚೇರಿಯಲ್ಲಿ ಇಂಥ ಘಟನೆ ನಡೆದಿದೆ. ಚುನಾವಣೆಗೆ ಮುನ್ನ ಇಂಥದ್ದೊಂದು ಘಟನೆ ನಡೆದಿರುವುದು ಆಕ್ರೋಶಕ್ಕೆ ಕೂಡ ಕಾರಣವಾಗಿದೆ.
Comments