ಸಿರಿಯಾ ಮೇಲೆ ಅಮೆರಿಕ ದಾಳಿಯಿಂದ ನೂರಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ

ಅಮೆರಿಕದ ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದ ಸಿರಿಯಾ ಸರ್ಕಾರಿ ಪಡೆಗಳ ವಿರುದ್ಧ ಪ್ರತಿ ದಾಳಿ ನಡೆಸಿರುವ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ನೂರಕ್ಕೂ ಹೆಚ್ಚು ಸಿರಿಯಾ ಪಡೆ ಸೈನಿಕರನ್ನುರನ್ನು ಸದೆಬಡಿದಿದೆ..
ಶೆಲ್, ಗ್ರೆನೆಡ್, ಟ್ಯಾಂಕ್, ಫೈಟರ್ ಜೆಟ್, ರಾಕೆಟ್ ಲಾಂಚರ್ಗಳನ್ನು ಬಳಸಿ ಮಾಡಿದ ಭೀಕರ ವಾಯುದಾಳಿ ಜೊತೆಗೆ ನೆಲದ ಮೇಲಿನಿಂದಲೂ ದಾಳಿ ನಡೆಸಿದ ಅಮೆರಿಕ ಪೂರ್ವ ಸಿರಿಯಾದ ಚಹರೆಯನ್ನೇ ಬದಲಾಯಿಸಿಬಿಟ್ಟಿದೆ. ಸಿರಿಯಾ ಮಾಧ್ಯಮಗಳೂ ಕೂಡ ಈ ವರದಿಯನ್ನು ಪುಷ್ಠೀಕರಿಸಿದ್ದು, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಸಿರಿಯಾದ ಡಿರಲ್ ಜೊರ್ ಪ್ರದೇಶದಲ್ಲಿ ಸರ್ಕಾರದ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ವರದಿ ಮಾಡಿವೆ. ಸಿರಿಯಾ ಡೆಮೆಕ್ರೊಟಿಕ್ ಫೋರ್ಸ್ನ ಕೇಂದ್ರ ಕಚೇರಿ ಡಿರಲ್ ಜೊರ್ ಪ್ರದೇಶದಲ್ಲಿಯೇ ಇದ್ದು, ಅದನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿರಿಯಾ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Comments