ಮಹಿಳೆಯರೇ ನೀವು ಫೇಸ್ ಬುಕ್ ಬಳಸ್ತಿದೀರಾ ಆಗಿದ್ರೆ ಈ ಸ್ಟೋರಿ ಓದಿ..!!

ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿರುವುದರಿಂದ ಫೇಸ್ ಬುಕ್‍ನಲ್ಲಿ ಡ್ಯಾಡೀಸ್ ಗೇಮ್ಸ್ ಲಿಂಕ್‍ನಿಂದಾಗಿ ಇಲ್ಲೊಬ್ಬರು ಮದುವೆಯಾಗಿರೋ ಗೃಹಿಣಿ ಮತ್ತೊಬ್ಬರ ಲವ್ವರ್ ಆಗಿ ಮುಜುಗರ ಅನುಭವಿಸಿದ್ದಾರೆ.
ಕಾಮಾಕ್ಷಿಪಾಳ್ಯದ ನಿವಾಸಿ ಪ್ರಶಾಂತ್ ಗೌಡ ಫೇಸ್ ಬುಕ್‍ನಲ್ಲಿ ಬರುವ ಲಿಂಕ್ ಬಳಸಿ ಅಶ್ವಿನಿ ನನ್ನ ಈ ವರ್ಷದ ಲವ್ವರ್ ಎಂದು ಸ್ಟೇಟಸ್ ಹಾಕಿಕೊಂಡಿದ್ದಾನೆ. ಜನಸ್ಮೃತಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆಯಾಗಿರುವ ಅಶ್ವಿನಿಯವರಿಗೆ ಸ್ನೇಹಿತರು ಈ ಬಗ್ಗೆ ಕರೆ ಮಾಡಿ ಮಾಹಿತಿ ತಿಳಿಸಿ, ಸ್ಕ್ರೀನ್ ಶಾಟ್ಸ್ ತೆಗೆದು ಕಳಿಸಿದ್ದಾರೆ. ಇದರಿಂದ ಆತಂಕಕ್ಕೊಳಗಾದ ಅಶ್ವಿನಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಮಹಿಳಾ ಸಂಘಟನೆಯ ಅಧ್ಯಕ್ಷರಿಗೆ ಈ ರೀತಿ ಮಾಡಿದರೆ ಸಾಮಾನ್ಯ ಹೆಣ್ಣುಮಕ್ಕಳ ಸ್ಥಿತಿ ಏನು ಎನ್ನುವುದು ಅಶ್ವಿನಿಯವರ ಪ್ರಶ್ನೆ. ಇಂತಹ ಕೆಟ್ಟ ಮನಸ್ಥಿತಿಗಳಿಗೆ ತಕ್ಕ ಪಾಠ ಕಲಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ಕ್ರೈಂ ಪೊಲೀಸರಿಗೆ ಮನವಿ ಮಾಡಿದ್ದಾರೆ.
Comments