ಪತ್ನಿಯೊಬ್ಬಳು ತನ್ನ ಪತಿಯನ್ನು ಗೂಂಡಾಗಳಿಂದ ರಕ್ಷಿಸಿದ ಘಟನೆ ಸಿಸಿಟಿವಿಯಲ್ಲಿ ದಾಖಲು

ಕೊಕ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಗೂಂಡಾಗಳು ಅಬಿದ್ ಅಲಿ ಎಂಬ ವ್ಯಕ್ತಿಯನ್ನು ಥಳಿಸಿದ್ದಾರೆ. ಮನೆಯಿಂದ ಹೊರಗೆಳೆದು ತಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆದರೆ ಅಬಿದ್ ಅಲಿ ಪತ್ನಿ ರಕ್ಷಣೆಗೆ ಧಾವಿಸಿದ್ದು, ಗೂಂಡಾಗಳ ಮೇಲೆ ಗುಂಡು ಹಾರಿಸಿ ಪತಿಯನ್ನು ರಕ್ಷಣೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.ಸಂತ್ರಸ್ತ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪತಿಯೊಬ್ಬಳು ತನ್ನ ಪತಿಯನ್ನು ಗೂಂಡಾಗಳಿಂದ ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಬಿದ್ ಪತ್ನಿ ಗುಂಡು ಹಾರಿಸುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿರುವ ಗೂಂಡಾಗಳು ಪರಾರಿಯಾಗುವುದಕ್ಕೂ ಮುನ್ನ ದಂಪತಿಗಳಿಗೆ ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
Comments