ರೈಲ್ ನಲ್ಲಿ ಮಲಗಿದ್ದ ನಟಿಗೆ ಲೈಂಗಿಕ ಕಿರುಕುಳ

ರೈಲಿನ ಎಸಿ ಬೋಗಿಯ ಬರ್ತ್ ನಲ್ಲಿ ಮಲಗಿದ್ದ ನಟಿಗೆ ಕಾಮುಕ ಕಿರುಕುಳ ನೀಡಿದ್ದಾನೆ. ರಾತ್ರಿ ಚಲಿಸುವ ರೈಲಲ್ಲಿ ಮಲಗಿದ್ದ ನಟಿಯ ಮೈ ಕೈ ಮುಟ್ಟಿದ ಕಾಮುಕ ಕಿರುಕುಳ ನೀಡಿದ್ದು, ನಿದ್ದೆಯಲ್ಲಿದ್ದ ನಟಿಗೆ ಎಚ್ಚರವಾಗಿದ್ದು, ಲೈಟ್ ಆನ್ ಮಾಡಿ ಕಿರುಚಾಡಿದ್ದಾರೆ. ಕತ್ತಲಲ್ಲಿ ಕಾಮುಕ ಪರಾರಿಯಾಗಿದ್ದಾನೆ. ಆದರೆ, ಅಲ್ಲಿದ್ದ ಪ್ರಯಾಣಿಕರು ನೆರವಿಗೆ ಬಂದಿಲ್ಲ.
ಬಹು ಭಾಷಾ ನಟಿ ಅಮಲಾ ಪೌಲ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತಾಗಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮತ್ತೊಬ್ಬ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಕನ್ನಡದ 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಸೇರಿದಂತೆ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಸನುಷಾ ಅವರಿಗೆ ಕಿರುಕುಳ ನೀಡಲಾಗಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಮಾವೆಲಿ ಎಕ್ಸ್ ಪ್ರೆಸ್ ನಲ್ಲಿ ತೆರಳುವ ಸಂದರ್ಭದಲ್ಲಿ ಕಾಮುಕ ಈ ಕೃತ್ಯವೆಸಗಿದ್ದಾನೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ನಟಿಗೆ ಚಿತ್ರರಂಗದಿಂದ ಬೆಂಬಲ ವ್ಯಕ್ತವಾಗಿದೆ.
Comments