ಶಾಸಕ ವರ್ತೂರು ಪ್ರಕಾಶ್ ಸೇರಿದಂತೆ ಆರು ಜನರ ವಿರುದ್ಧ ಎಫ್‌ಐಆರ್

ಕೋಲಾರ ತಾಲೂಕಿನ ಬೆಗ್ಲಿ ಬಳಿ ಅಕ್ರಮವಾಗಿ ಭೂ ಕಬಳಿಕೆ, ಚಿನ್ನೇನಹಳ್ಳಿ ಸರ್ವೇ ನಂ.21 ರಲ್ಲಿ 1.30 ಎಕರೆ ಭೂಮಿಯನ್ನು ಮುನಿಯಪ್ಪ ಎಂಬವವರಿಂದ ವರ್ತೂರು ಪ್ರಕಾಶ್ ಅಣ್ಣನ ಮಗ ರಕ್ಷಿತ್ ಹೆಸರಿನಲ್ಲಿ ಅಕ್ರಮವಾಗಿ ಪಡೆದಿರುವ ಅರೋಪವಿತ್ತು. ದಲಿತರಿಗೆ ವಂಚಿಸಿ ಭೂ ಕಬಳಿಕೆ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.
ಅಕ್ರಮವಾಗಿ ಭೂ ಕಬಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ವರ್ತೂರು ಸೇರಿದಂತೆ 6 ಜನರ ವಿರುದ್ಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹಣ ಕೊಡುವುದಾಗಿ ಭೂಮಿ ಪಡೆದು ಶಾಸಕರು ಸೇರಿದಂತೆ ಶಾಸಕರ ಆಪ್ತರು ವಂಚಿಸಿದ್ದರು ಎಂದು ಚನ್ನಮ್ಮ ಎನ್ನುವವರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲಿಸ್ ಅಧಿಕಾರಿಗಳು ಸೆಕ್ಷನ್ 419, 420, 468, 471, 504, 506, 34 ಸೇರಿದಂತೆ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments